ಮಂಗಳೂರು: ನವೀಕೃತ ಡೋನ್ ಬೋಸ್ಕೋ ಹಾಲ್ ಉದ್ಘಾಟನೆ

Update: 2022-01-27 15:43 GMT

ಮಂಗಳೂರು, ಜ.27: ನಗರದ ಜ್ಯೋತಿ-ಹಂಪನಕಟ್ಟೆ ಸಮೀಪದ ಅತ್ಯಂತ ಹಳೆಯ ನಾಟಕ ಹಾಗೂ ಕಲಾ, ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಮೀಸಲಾಗಿರುವ ಡೋನ್ ಬೋಸ್ಕೋ ಹಾಲ್‌ನ ನವೀಕೃತ ಸಭಾಂಗಣವನ್ನು ಮಂಗಳೂರು ಬಿಷಪ್ ರೈ. ರೆ. ಡಾ. ಪೀಟರ್ ಪೌಲ್ ಸಲ್ದಾನಾ ಗುರುವಾರ ಉದ್ಘಾಟಿಸಿದರು.

ಕೊಂಕಣಿ ನಾಟಕ ಸಭಾದ ಅಧ್ಯಕ್ಷ ರೆ.ಫಾ.ಪೌಲ್ ಮೆಲ್ವಿನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕಾಪುಚಿನ್ ಧರ್ಮಗುರುಗಳ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥ ರೆ.ಡಾ. ಆಲ್ವಿನ್ ಡಯಾಸ್ ಪ್ರಾರ್ಥಿಸಿದರು. ಅನಿವಾಸಿ ಉದ್ಯಮಿ ಲಿಯೋ ರೊಡ್ರಿಗಸ್ ಹಾಗೂ ಲವೀನಾ ರೊಡ್ರಿಗಸ್ ವೇದಿಕೆಯನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕಲಾವಿದರು ಮಣ್ಣಿನ ಆಸ್ಮಿತೆಯನ್ನು ಸಾರುವ ಸಮುದಾಯವಾಗಿದೆ. ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ದೇಶ ವಿದೇಶಗಳಲ್ಲಿ ಪಸರಿಸುವಲ್ಲಿ ಕಲಾವಿದರ ಕೊಡುಗೆ ಅಪಾರವಾಗಿದೆ ಎಂದರು.

ಆಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಫಾ. ಮೆಲ್ವಿನ್ ಪಿಂಟೋ, ಉದ್ಯಮಿ ಸಂತೋಷ್ ಸಿಕ್ವೇರಾ ಅತಿಥಿಗಳಾಗಿದ್ದರು. ಸಭಾದ ಉಪಾಧ್ಯಕ್ಷ ಲಿಸ್ಟನ್ ಡೆರಿಕ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಫ್ಲಾಯ್ಡ್ ಡಿಮೆಲ್ಲೊ, ಸಾರ್ವಜನಿಕ ಸಂಪರ್ಕ ಅಧಿಕಾರಿ ರೈಮಂಡ್ ಡಿ ಕುನ್ಹಾ, ಕೋಶಾಧಿಕಾರಿ ಜೆರಾಲ್ಡ್ ಕೊನ್ಸೆಸ್ಸೋ, ಜೊತೆ ಕಾರ್ಯದರ್ಶಿ ಪ್ರವೀಣ್ ರೊಡ್ರಿಗಸ್, ಕಾರ್ಯಕಾರಿ ಸಮಿತಿ ಸದಸ್ಯ ಕ್ಲೀಟಸ್ ಲೋಬೋ, ಫೋರ್‌ವಿಂಡ್ಸ್ ಜಾಹೀರಾತು ಸಂಸ್ಥೆಯ ನಿರ್ದೇಶಕ ಇ ಫೆರ್ನಾಂಡೀಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News