ಗಡಿಭಾಗದಲ್ಲಿ 27 ಶಂಕಿತ ವ್ಯಕ್ತಿಗಳನ್ನು ಗುಂಡಿಕ್ಕಿ ಹತ್ಯೆಗೈದ ಜೋರ್ಡನ್ ಸೇನೆ

Update: 2022-01-27 17:50 GMT
ಸಾಂದರ್ಭಿಕ ಚಿತ್ರ

ಅಮ್ಮಾನ್, ಜ.27: ನೆರೆಯ ಸಿರಿಯಾದಿಂದ ಗಡಿ ದಾಟಿ ಒಳನುಗ್ಗಲು ಪ್ರಯತ್ನಿಸಿದ 27 ಶಂಕಿತ ಕಳ್ಳಸಾಗಾಣಿಕೆದಾರರನ್ನು ಜೋರ್ಡನ್ ಪಡೆ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.

ಮಾದಕ ವಸ್ತುಗಳನ್ನು ಹೊಂದಿದ್ದ ಇತರ ಕೆಲವರು ಮರಳಿ ಸಿರಿಯಾದತ್ತ ಪಲಾಯನ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿರಿಯಾ ಗಡಿಭಾಗದಿಂದ ಜೋರ್ಡಾನ್‌ಗೆ ಮಾದಕ ವಸ್ತುಗಳನ್ನು ಕಳ್ಳಸಾಗಾಟ ಮಾಡುವ ಹಲವು ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ. ಅಲ್ಲದೆ ಜೋರ್ಡನ್‌ನ ಮುಖ್ಯ ಗಡಿದಾಟು ಮೂಲಕ ಆಗಮಿಸಿದ ಸಿರಿಯಾದಟ್ರಕ್‌ನಲ್ಲಿ ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಮಾದಕ ವಸ್ತುವನ್ನು ಜಫ್ತಿ ಮಾಡಲಾಗಿದೆ ಎಂದು ಜೋರ್ಡನ್ ಸೇನೆ ಹೇಳಿದೆ.

ಗಡಿಭಾಗದಲ್ಲಿ ಒಳನುಸುಳುವ ಪ್ರಯತ್ನ ಮತ್ತು ಕಳ್ಳಸಾಗಾಣಿಕೆ ಪ್ರಯತ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೇನೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News