ಟೆಸ್ಟ್ ಶತಕದ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಬೆನ್ನಿಗೆ ನಿಂತ ಮುಹಮ್ಮದ್ ಶಮಿ

Update: 2022-01-28 07:07 GMT

ಹೊಸದಿಲ್ಲಿ: ಕೋಲ್ಕತ್ತಾದಲ್ಲಿ 2019ರ ನವೆಂಬರ್ 22ರಂದು ಬಾಂಗ್ಲಾದೇಶದ ವಿರುದ್ಧ 70ನೇ ಶತಕ ಸಿಡಿಸಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸದೇ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಟೀಕೆಗೆ ಒಳಗಾಗಿದ್ದಾರೆ. ಕೊಹ್ಲಿಯ ಶ್ರೇಷ್ಠ ದಿನಗಳು ಕಳೆದುಹೋಗಿವೆಯೇ? ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಹ ಆಟಗಾರ ಮುಹಮ್ಮದ್ ಶಮಿ ಅವರು ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ.

" ಅವರು (ಕೊಹ್ಲಿ) ಶತಕ ಗಳಿಸದಿದ್ದರೆ ಏನಾಗುತ್ತದೆ.  ಶತಕವು ಅವರು ಎಷ್ಟು ದೊಡ್ಡ ಆಟಗಾರ ಎಂದು ವ್ಯಾಖ್ಯಾನಿಸುವುದಿಲ್ಲ. ಅವರು ರನ್ ಗಳಿಸಿಲ್ಲ ಎಂದು ಅರ್ಥವಲ್ಲ" ಎಂದು ಟೀಮ್ ಇಂಡಿಯಾ ವೇಗಿ India. com. ಅನ್ನುಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

"ಕೊಹ್ಲಿ  ಇತ್ತೀಚಿನ ದಿನಗಳಲ್ಲಿ ಸತತವಾಗಿ ಅರ್ಧಶತಕಗಳನ್ನು ಗಳಿಸಿದ್ದಾರೆ . ಐವತ್ತು ಅಥವಾ ಅರವತ್ತು ಕೂಡ ಒಂದು ಸ್ಕೋರ್ . ಆ ಮೊತ್ತವು ತಂಡದ ಗೆಲುವಿಗೆ ನೆರವಾಗುವ ತನಕ ಆ ಕುರಿತು  ದೂರು ನೀಡಲು ಯಾವುದೇ ಕಾರಣವಿಲ್ಲ’’ ಎಂದರು.

ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1-2  ಅಂತರದ ಟೆಸ್ಟ್ ಸರಣಿ ಸೋಲಿನ ನಂತರ ಕೊಹ್ಲಿ ಇತ್ತೀಚೆಗೆ ಭಾರತದ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದರು.

ಕೊಹ್ಲಿ ನಾಯಕತ್ವದಲ್ಲಿ, ಶಮಿ ಅವರು ಜಸ್ಪ್ರೀತ್ ಬುಮ್ರಾ ಜೊತೆಗೆ ಭಾರತದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು.

ತನ್ನ ಸಹ ಆಟಗಾರನ ನಾಯಕತ್ವದ ಕೌಶಲ್ಯವನ್ನು ಹೊಗಳಿದ ಶಮಿ,  ಕೊಹ್ಲಿ ಅವರನ್ನು "ಬೌಲರ್‌ಗಳ ನಾಯಕ" ಎಂದು ಶ್ಲಾಘಿಸಿದರು.

ಕೊಹ್ಲಿಯ ಶಕ್ತಿಯು ಅತ್ಯುತ್ತಮ ವಿಷಯವಾಗಿದೆ ಮತ್ತು ಅದು ತಂಡದ ಉಳಿದ ಆಟಗಾರರಿಗೆ ಪ್ರಭಾವ ಬೀರುತ್ತದೆ. ಅವರು ಬೌಲರ್‌ಗಳ ನಾಯಕರಾಗಿದ್ದಾರೆ ಮತ್ತು ಯಾವಾಗಲೂ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನಮಗೆ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಅವರು ಯಾವಾಗಲೂ ನಮ್ಮ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತಾರೆ ಹಾಗೂ  ಆಯ್ಕೆಗಳನ್ನು ಕೇಳುತ್ತಾರೆ" ಎಂದು ಅವರು ಹೇಳಿದರು.

"ನಾವು ಒಟ್ಟಿಗೆ ತುಂಬಾ ಸಮಯವನ್ನು ಕಳೆದಿದ್ದೇವೆ ಮತ್ತು ಹಲವಾರು ಸ್ಮರಣೀಯ ಕ್ಷಣಗಳಿವೆ. ಅದು ಯಾವಾಗಲೂ ನನ್ನೊಂದಿಗೆ ಇರುತ್ತದೆ ಹಾಗೂ  ಅಂತಹ ಯಾವುದೇ ಕ್ಷಣವನ್ನು ಮರೆಯುವುದು ಅಥವಾ ಆಯ್ಕೆ ಮಾಡುವುದು ಕಷ್ಟ" ಎಂದು ಶಮಿ  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News