ಹಿರಿಯ ರಂಗನಟ ಸೀತಾರಾಮ ಶೆಟ್ಟಿ ನಿಧನ

Update: 2022-01-28 16:28 GMT

ಮಂಗಳೂರು, ಜ.28: ತುಳು ನಾಟಕ ರಂಗದ ಹಿರಿಯ ಕಲಾವಿದ ಸೀತಾರಾಮ ಶೆಟ್ಟಿ (83) ಪಚ್ಚನಾಡಿಯ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.

ಮೃತರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಕಳೆದ 65 ವರ್ಷಗಳಿಂದ ತುಳು ನಾಟಕ ರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ಕಲಾಸೇವೆ ಯಲ್ಲಿ ತೊಡಗಿರುವ ಅವರು ಕೆ.ಎನ್.ಟೇಲರ್‌ರ ಗಣೇಶ ನಾಟಕ ಸಭಾದಲ್ಲಿ 48 ವರ್ಷಗಳ ಕಾಲ ಸಕ್ರಿಯರಾಗಿದ್ದರು.

ತುಳು ನಾಟಕ ಕಲಾವಿದರ ಒಕ್ಕೂಟ, ಕಲಾ ಸಂಗಮ ಮಂಗಳೂರು, ಚಾ ಪರ್ಕ ಕಲಾವಿದರ ತಂಡ, ಲಕುಮಿ ನಾಟಕ ತಂಡ ಸಂತಾಪ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News