×
Ad

ಮಾರ್ಚ್ ತಿಂಗಳಲ್ಲಿ ಎಪಿಎಂಸಿ ರೈಲ್ವೇ ಕೆಳಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ: ದಿನೇಶ್ ಮೆದು

Update: 2022-01-29 17:27 IST

ಪುತ್ತೂರು: ಪುತ್ತೂರಿನ ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿರುವ ಎಪಿಎಂಸಿ ರೈಲ್ವೇ ಕೆಳ ಸೇತುವೆ ನಿರ್ಮಾಣ ಕಾಮಗಾರಿಗೆ ಮಾರ್ಚ್ ತಿಂಗಳಿನಲ್ಲಿ ಶಿಲನ್ಯಾಸ ಕಾರ್ಯಕ್ರಮ ನಡೆಸಲಾಗುವುದು. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಜತೆ ಮಾತನಾಡಿ ಶಿಲನ್ಯಾಸಕ್ಕೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದ್ದಾರೆ. 

ಎಪಿಎಂಸಿ ಸಾಮಾನ್ಯ ಸಭೆಯು ಶನಿವಾರ ಅಧ್ಯಕ್ಷ ದಿನೇಶ್ ಮೆದು ಅವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. 

ಸಭೆಯಲ್ಲಿ 2022-23ನೇ ಆರ್ಥಿಕ ಸಾಲಿಗೆ ರೂ.2,81,45,000 ಆದಾಯ ನಿರೀಕ್ಷಿಸಲಾಗಿದ್ದು, ರೂ. 1,56,39,333 ಖರ್ಚುಗಳ ಬಜೆಟ್ ಮುಂಗಡಪತ್ರ ಮಂಡಿಸಲಾಯಿತು. ಮುಂಗಡಪತ್ರವನ್ನು  ಪ್ರಭಾರ ಕಾರ್ಯದರ್ಶಿ ರಾಮಚಂದ್ರ ಮಂಡಿಸಿ ಮುಂದಿನ ಹಣಕಾಸು ವರ್ಷದಲ್ಲಿ ಮಾರುಕಟ್ಟೆ ಶುಲ್ಕದ ಮೂಲಕ 2,40,00,000 ರೂ. ಆದಾಯ ನಿರೀಕ್ಷಿಸಲಾಗಿದೆ. ಅದೇ ರೀತಿ ಬಳಕೆದಾರರ ಶುಲ್ಕದ ಮೂಲಕ 40,000 ರೂ., ಪುಸ್ತಕ ಮತ್ತು ಫಾರಂ ಮಾರಾಟದಿಂದ 25,000 ರೂ., ಠೇವಣಿಗಳ ಮೇಲಿನ ಬಡ್ಡಿಯ ಮೂಲಕ 3 ಲಕ್ಷ ರೂ., ಕಟ್ಟಡಗಳ ಲೀವ್ ಆ್ಯಂಡ್ ಲೈಸೆನ್ಸ್ ಶುಲ್ಕದಿಂದ 35,00,000 ರೂ., ಕಟ್ಟಡಗಳ ಲೀವ್ ಆ್ಯಂಡ್ ಲೈಸೆನ್ಸ್ ಶುಲ್ಕದ ಮೇಲೆ ದಂಡದ ಮೂಲಕ 25,000 ರೂ., ಮಾರುಕಟ್ಟೆ ಶುಲ್ಕದ ಮೇಲೆ ದಂಡದ ಮೂಲಕ 2,00,000 ರೂ., ಗೋದಾಮು ನೋಂದಣಿ ಶುಲ್ಕದಿಂದ 3000 ರೂ. ಅಡಮಾನ ಸಾಲದ ಮೇಲಿನ ಬಡ್ಡಿಯಿಂದ 50,000 ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು. ಸಮಿತಿ ಸದಸ್ಯರು ಮುಂಗಡಪತ್ರಕ್ಕೆ ಒಪ್ಪಿಗೆ ನೀಡಿದರು.  

ಎಪಿಎಂಸಿ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ್, ನಿರ್ದೇಶಕರಾದ ಅಬ್ದುಲ್ ಶಕೂರ್ ಹಾಜಿ, ಬೂಡಿಯಾರ್ ರಾಧಾಕೃಷ್ಣ ರೈ, ಪುಲಸ್ತ್ಯಾ ರೈ, ತ್ರಿವೇಣಿ ಪೆರ್ವೋಡಿ, ತೀರ್ಥಾನಂದ ದುಗ್ಗಲ, ಕೊರಗಪ್ಪ, ಕುಶಾಲಪ್ಪ ಗೌಡ, ಮೇದಪ್ಪ ಗೌಡ, ಕೃಷ್ಣಕುಮಾರ್ ರೈ, ನಾಮನಿರ್ದೇಶಿತ ಸದಸ್ಯರಾದ ಮೋಹನಾಂಗಿ, ಬಾಲಕೃಷ್ಣ ಜೋಯಿಸ ಉಪಸ್ಥಿತರಿದ್ದರು. ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಸ್ವಾಗತಿಸಿ, ಕಲಾಪ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News