ಪುತ್ತೂರು: ಕರ್ನಾಟಕ ಉಪವಲಯಾರಣ್ಯಾಧಿಕಾರಿಗಳ ಮಹಾಸಭೆ, ಡೈರಿ ಬಿಡುಗಡೆ
ಪುತ್ತೂರು: ಮನುಷ್ಯ ತನ್ನ ಐಷಾರಾಮಿ ಜೀವನಕ್ಕಾಗಿ ಪೃಕೃತಿಯನ್ನು ಕೆಡಿಸುತ್ತಿದ್ದು, ಕಾಡುಗಳ ನಾಶದಿಂದಾಗಿ ವನ್ಯ ಜೀವಿಗಳು ಜನವಾಸ ಇರುವ ಕಡೆಗೆ ಬರುತ್ತಿದೆ. ಪೃಕೃತಿ ಮುನಿದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಅವರು ಪುತ್ತೂರಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ ಮಂಗಳೂರು ವಿಭಾಗ ಇದರ ವಾರ್ಷಿಕ ಮಹಾಸಭೆ ಮತ್ತು ಡೈರಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪೃಕೃತ್ತಿಯಿಂದರೆ ಎಲ್ಲವುಗಳನ್ನು ಒಳಗೊಂಡ ಒಂದು ಪ್ರಪ್ರಂಚ, ಇದರಲ್ಲಿ ವನ, -ಜನ ಮತ್ತು ವನ್ಯ ಇವು ಸಮತೋಲದಲ್ಲಿಯೇ ಸಾಗಬೇಕು ಆಗ ಮಾತ್ರ ಅದು ಪೃಕೃತಿ ಎನಿಸಲು ಸಾಧ್ಯವಾಗುತ್ತದೆ ಯಥೇಚ್ಚವಾಗಿ ಕಾಡುಗಳಿದ್ದಲ್ಲಿ, ಸುಂದರ ಪರಿಸರ ಇದ್ದಲ್ಲಿ ಸಾಂಕ್ರಾಮಿಕ ರೋಗಗಳು ಉಂಟಾಗುವುದಿಲ್ಲ. ಪ್ರತಿಯೊಂದು ಇಲಾಖೆಯೂ ಜನರ ವಿಶ್ವಾಸ ಗಳಿಸುವಲ್ಲಿ ಮೊದಲ ಆಧ್ಯತೆ ನೀಡಬೇಕು. ಜನತೆ ಇಲಾಖೆಯ ಮೇಲಿನ ವಿಶ್ವಾಸ ಕಳೆದುಕೊಂಡರೆ ಅದು ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸಕ್ಕೆ ಕೊರತೆಯುಂಟಾಗುತ್ತದೆ. ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಪ್ರತಿಯೊಂದು ಇಲಾಖೆಯೂ ಹಮ್ಮಿಕೊಳ್ಳುವ ಮೂಲಕ ಜನಸ್ನೇಹಿಯಾಗಬೇಕು. ಕಾಡು ಸಂರಕ್ಷಿಸುವಲ್ಲಿ ನಾವು ಪ್ರತೀಯೊಬ್ಬರೂ ಮುತುವರ್ಜಿವಹಿಸಬೇಕು ಎಂದು ಹೇಳಿದರು.
ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್‍ಕುಮಾರ್ ವೈ ಕೆ ಮಾತನಾಡಿ ಕಾಡನ್ನೊಳಗೊಂಡ ಪರಿಸರದಿಂದ ಮಾತ್ರ ನಾವು ಪೃಕೃತ್ತಿಯ ಸಮತೋಲವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ, ಉಪ ವಮಯ ಅರಣ್ಯಾಧಿಕಾರಿಗಳಿಂದ ಗ್ರಾಮೀಣ ಭಾಗದಲ್ಲಿ ಕಾಡುಗಳನ್ನು ಬೆಳೆಸಿ ಉಳಿಸುವ ಕಾರ್ಯಕ್ಕಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಹೇಳಿದರು.
ಉಪವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಸಂತೋಷ್ ರೈ ಕೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ಪುತ್ತೂರು ಉಪವಿಭಾಗ ಸಯಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ ಪಿ ಕಾರ್ಯಪ್ಪ, ಉಡುಪಿ ಅರಣ್ಯ ಸಂಛಾರಿದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ, ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಕರ್ನಾಟಕ ಸರಕಾರಿ ನೌಕರರ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ , ಬಲ್ನಾಡು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರೈ ಬಿ ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಕುಮಾರಸ್ವಾಮಿ ವಂದಿಸಿದರು. ಶಿಕ್ಷಕ ಭಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.