×
Ad

​ಉಡುಪಿ ಜಿಲ್ಲಾ ಕಾಂಗ್ರೆಸ್ ಸೇವಾದಳದ ಕಾರ್ಯಕಾರಿ ಸಮಿತಿ ಸಭೆ

Update: 2022-01-29 20:25 IST

ಉಡುಪಿ, ಜ.29: ಜಿಲ್ಲಾ ಕಾಂಗ್ರೆಸ್ ಸೇವಾದಳದ ಕಾರ್ಯಕಾರಿ ಸಮಿತಿಯ ಸಭೆ ನಾಯರ್‌ಕೆರೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜರಗಿತು. ಜಿಲ್ಲಾ ಸೇವಾದಳದ ಅಧ್ಯಕ್ಷ ಕಿಶೋರ್‌ಕುಮಾರ್ ಎರ್ಮಾಳ್ ಸಭಾಧ್ಯಕ್ಷತೆಯನ್ನು ವಹಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಮಹಾತ್ಮಾ ಗಾಂಧೀಜಿ ಭಾವಚಿತ್ರಕ್ಕೆ ಖಾದಿ ಹಾರವನ್ನು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು 1923ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸೇವಾದಳ, ಕಾಂಗ್ರೆಸ್ ಸೇವಾದಳವಾಗಿ ಮಾರ್ಪಾಡಾಗಿದ್ದು, ಪ್ರಾಮಾಣಿಕ ಜನಸೇವೆ ಮಾಡುವವರನ್ನು ಮಾತ್ರ ಹೊಂದಿರುವ ಸಂಘಟನೆಯಾಗಿದೆ ಕಾಂಗ್ರೆಸ್‌ನ ಮುಂಚೂಣಿ ಘಟಕಗಳಲ್ಲಿ ಪ್ರಮುಖವಾದದ್ದು ಸೇವಾದಳ ಎಂದರು.

ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಮಂಡಿಸಲಾಗಿ ಪರಿಹಾರೋಪಾಯವನ್ನು ದಾಖಲಿಸಲಾಯಿತು.ಸೇವಾದಳವನ್ನು ಇನ್ನಷ್ಟು ಬಲಪಡಿಸುವ ನಿರ್ಧಾರ ಕೈಗೊಳ್ಳಲಾಯಿತು. ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಅಣ್ಣಯ್ಯ ಸೇರಿಗಾರ್, ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಶರತ್ ನಾಯ್ಕ, ಕುಮಾರ್ ಖಾರ್ವಿ, ಪ್ರಕಾಶ್ ಆಚಾರ್ಯ, ಲಕ್ಷ್ಮೀ ನಾಯ್ಕ, ಅರುಣ್ ಬಿ.ಕೆ., ಧರ್ಮಪ್ರಕಾಶ್, ಜ್ಯೋತಿ ಕುಂದಾಪುರ, ಅಬ್ದುಲ್ಲಾ ಶೇಕ್ ಆದಮ್, ರಾಜೇಶ್ ಮೆಂಡನ್, ಮೋಹನ್ ಸುವರ್ಣ, ಹುಸೈನ್ ಹಾಗೂ ಲಕ್ಷ್ಮೀಶ್ ಶೆಟ್ಟಿ, ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ಗ್ರಾಯತ್ರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News