×
Ad

​ಮಣಿಪಾಲ: ಹೆಬ್ರಿಬೀಡು ಡಾ.ಅರವಿಂದ ಬಲ್ಲಾಳ್ ಸ್ಮಾರಕ ದತ್ತಿನಿಧಿ ಉದ್ಘಾಟನೆ

Update: 2022-01-29 20:27 IST

ಮಣಿಪಾಲ, ಜ.29: ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆ, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು ಹಾಗೂ ಯೆನಪೋಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರು ಹಾಗೂ ಜನಪ್ರಿಯ ಪ್ರಾಧ್ಯಾಪಕರಾಗಿ ಸುಮಾರು ನಾಲ್ಕೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಹೆಬ್ರಿಬೀಡು ಡಾ.ಅರವಿಂದ ಬಲ್ಲಾಳ್‌ರ ಸ್ಮರಣಾರ್ಥ ಅವರ ಕುಟುಂಬಿಕರು ಹಾಗೂ ಶಿಷ್ಯರು ಮಾಹೆಯಲ್ಲಿ ಸ್ಥಾಪಿಸಿರುವ ದತ್ತಿನಿಧಿಯನ್ನು ಇಂದು ಉದ್ಘಾಟಿಸಲಾಯಿತು.

ಈ ದತ್ತಿನಿಧಿಯನ್ನು ಮಣಿಪಾಲ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ರಂಜನ್ ಆರ್.ಪೈ ಅವರು ಉದ್ಘಾಟಿಸಿದರು. ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್ ಹಾಗೂ ಮಾಹೆಯ ಸಹಕುಲಪತಿ ಡಾ.ಎಂ.ವೆಂಕಟ್ರಾಯ ಪ್ರಭು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡಾ.ಅರವಿಂದ ಬಲ್ಲಾಳ್‌ರ ಆಶಯಗಳನ್ನು ಕಾರ್ಯಗತಗೊಳಿಸಲು ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆಯಲ್ಲಿ ವಿಶ್ವಸ್ಥ ಮಂಡಳಿಯೊಂದನ್ನು ರಚಿಸಲಾಗಿದೆ. ಮಾಹೆಯ ಸಹಕುಲಪತಿ ಡಾ.ವೆಂಕಟ್ರಾಯ ಪ್ರಭು, ಮಂಗಳೂರಿನ ಅರವಳಿಕೆ ತಜ್ಞ ಡಾ.ದಿವಾಕರ ಶೆಟ್ಟಿ ಸದಸ್ಯರು ಹಾಗೂ ಮಂಗಳೂರು ಕೆಎಂಸಿ ಕಾಲೇಜಿನ ಡೀನ್ ಪದನಿಮಿತ್ತ ಸದಸ್ಯರಾಗಿದ್ದಾರೆ. ಅತ್ತಾವರ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮಂಡಳಿಯ ಪದ ನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿರುವರು. ಒಟ್ಟು 1.5ಕೋಟಿ ರೂ.ಮೂಲಧನದೊಂದಿಗೆ ಪ್ರಾರಂಭಗೊಂಡಿರುವ ಈ ದತ್ತಿನಿಧಿಯಿಂದ ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರಿಗೆ ವೈದ್ಯಕೀಯ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News