×
Ad

ಆಸ್ಟ್ರೇಲಿಯನ್ ಓಪನ್ ಟೆನಿಸ್‌ನ ಸಂಘಟನಾ ಸಿಬ್ಬಂದಿ ತಂಡದಲ್ಲಿ ಉಡುಪಿಯ ಚಾರ್ವಿ ಶೆಟ್ಟಿ

Update: 2022-01-30 20:09 IST

ಉಡುಪಿ: ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನೆಲೆಸಿರುವ ಉಡುಪಿ ಮೂಲದ ಚಾರ್ವಿ ಶೆಟ್ಟಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್ ನ ಸಂಘಟನಾ ಸಿಬ್ಬಂದಿ ತಂಡದಲ್ಲಿ ಆಯ್ಕೆಯಾಗಿದ್ದು ಬಾಲ್ ಕಿಡ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಸ್ಟ್ರೇಲಿಯನ್ ಓಪನ್ ಟೆನಿಸ್‌ನ ಪುರುಷರ ಹಾಗೂ ಮಹಿಳೆಯರ ಫೈನಲ್ ಪಂದ್ಯಾಟದ ಧ್ವಜವಂದನಾ ತಂಡದಲ್ಲೂ ಇವರು ಇದ್ದಾರೆ. ಆಸ್ಟ್ರೇಲಿಯಾದ ಮೆಲ್ಬರ್ನ್‌ನ ಹ್ಯಾಲಿಬರಿ ಕಾಲೇಜಿನಲ್ಲಿ ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಚಾರ್ವಿ ಶೆಟ್ಟಿ, ಸ್ವತಃ ಟೆನಿಸ್ ಆಟಗಾರ್ತಿಯಾಗಿದ್ದು ಉತ್ತಮ ಈಜುಪಟು ಕೂಡಾ ಆಗಿದ್ದಾರೆ.

ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಇವರು, ಉತ್ತಮ ಚಿತ್ರ ಕಲಾವಿದೆಯಾಗಿದ್ದಾರೆ. ಇವರು ರಾಜ್ಯಮಟ್ಟದ ಅಂತರ ಶಾಲಾ ಟೆನಿಸ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಈಜುಗಾರಿಕೆಯಲ್ಲಿ ರಾಜ್ಯ ತಂಡದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ಇವರು ಬಸ್ರೂರು ಕೋಳ್ಕೆರೆ ಅನಂತರಾಮಶೆಟ್ಟಿ ಮತ್ತು ಕೊರಂಗ್ರ ಪಾಡಿ ದೊಡ್ಡಮನೆ ಬೈಕಾಡಿ ಸುಶ್ಮಿತಾ ಶೆಟ್ಟಿ ದಂಪತಿ ಪುತ್ರಿ ಮತ್ತು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರ ಸಹೋದರಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News