×
Ad

ಅಂದರ್ ಬಾಹರ್: 10 ಮಂದಿ ಬಂಧನ

Update: 2022-01-31 21:33 IST

ಉಡುಪಿ, ಜ.31: ನಗರದ ಕರಾವಳಿ ಬೈಪಾಸ್ ಬಳಿ ಜ.30ರಂದು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ 10 ಮಂದಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಮೂಲದ ಗಣೇಶ್ ಯಲ್ಲಪ್ಪ ಬೆಳವಣಕಿ, ಸಂತೋಷ ಮುತ್ತಪ್ಪ ಕೊಣೇರಿ, ಮುತ್ತುರಾಜ್ ಈರಪ್ಪಸುರಪುರ, ಹಣಮಂತ ಫಕೀರಪ್ಪ, ಶಿವಪ್ಪ ಹನುಮಪ್ಪಮೇಟಿ, ಬಸನಗೌಡ ಪಾಟೀಲ್, ಹಾವೇರಿ ಮೂಲದ ಮಾಲತೇಶ್ಚಂದ್ರಪ್ಪ, ವಿಜಯ ನಗರದ ಅಂಗಡಿ ಕೊಟ್ರೇಶ ಹಗರಿ, ಯಾದಗಿರಿಯ ಸೋಮನಗೌ ಸುರಪುರ ಬಂಧಿತ ಆರೋಪಿಗಳು. ಇವರಿಂದ 5750ರೂ. ನಗದು ಹಾಗೂ 30,000 ರೂ. ಮೌಲ್ಯದ 5 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News