×
Ad

ಕುಂದಾಪುರದ ಬಸ್ರೂರಿಗೆ ಆಗಮಿಸಿದ ರಾಕಿಂಗ್ ಸ್ಟಾರ್ ಯಶ್; ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ

Update: 2022-02-01 12:42 IST

ಕುಂದಾಪುರ: ರಾಕಿಂಗ್ ಸ್ಟಾರ್ ಯಶ್ ಅವರು ಕುಂದಾಪುರ ತಾಲೂಕಿನ ಬಸ್ರೂರಿಗೆ ಆಗಮಿಸಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಕೆಜಿಎಫ್-2ಗೆ ಅಂತಿಮ ಟಚ್ ಮ್ಯೂಸಿಕ್ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ಯಶ್ ಅವರು ಇಲ್ಲಿಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಕ್ರಿಕೆಟ್ ಆಡಿದ ಯಶ್...

ಬಸ್ರೂರಿಗೆ ಆಗಮಿಸಿದ ಯಶ್ ಬಿಡುವಿನ‌ ವೇಳೆಯಲ್ಲಿ ಸ್ಥಳೀಯ ಯುವಕರ ಜತೆ ಕ್ರಿಕೆಟ್ ಆಡಿದ್ದಾರೆ. ರವಿ ಬಸ್ರೂರು ಅವರ ಮನೆ ಬಳಿ ಆಟದ ಮೈದಾನದಲ್ಲಿ ಹುಡುಗರೊಂದಿಗೆ ಕೆಲ ಹೊತ್ತು ಕ್ರಿಕೆಟ್ ಆಡಿ ಕಾಲ ಕಳೆದಿದ್ದಾರೆ. ಸದ್ಯ ಈ ವೀಡಿಯೊ  ವೈರಲ್ ಆಗಿದೆ.

ಆನೆಗುಡ್ಡೆಗೆ ಭೇಟಿ

ಮಂಗಳವಾರ ಬೆಳಗ್ಗೆ ಯಶ್ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಈ ಸಂದರ್ಭ ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News