×
Ad

ಸುಳ್ಯ: ಬಿಜೆಪಿಯ ಹಿರಿಯ ಮುಖಂಡ ಉಮೇಶ್ ವಾಗ್ಲೆ ನಿಧನ

Update: 2022-02-01 13:50 IST

ಸುಳ್ಯ: ಸುಳ್ಯದ ಹಿರಿಯ ಸಾಮಾಜಿಕ ಮುಖಂಡ, ಬಿಜೆಪಿಯ ಹಿರಿಯ ನೇತಾರರಾದ ಉಮೇಶ್ ವಾಗ್ಲೆ ಅವರು ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ವಯೋಸಹಜ ಅಸೌಖ್ಯದಿಂದ ಬಳಲಿದ್ದ ಅವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಇದೀಗ ಕೆಲವು ದಿನಗಳ ಕಾಲ ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.

ಸುಳ್ಯ ಸಿಎ ಬ್ಯಾಂಕ್‌ನ ನಿರ್ದೇಶಕರಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಗಾಂಧಿನಗರ ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿಯಾಗಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರ್ಯಕರ್ತರಾಗಿದ್ದ ಉಮೇಶ್ ವಾಗ್ಲೆಯವರು ಬಿಜೆಪಿಯ ಹಿರಿಯ ಮುಖಂಡರಾಗಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಉಮೇಶ್ ವಾಗ್ಲೆಯವರು ಅವಿವಾಹಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News