×
Ad

ಮಣಿಪಾಲ: ಹೊತ್ತಿ ಉರಿದ ಅಪಘಾತಕ್ಕೀಡಾದ ಸ್ಕೂಟರ್‌

Update: 2022-02-01 16:10 IST

ಮಣಿಪಾಲ, ಫೆ.1: ಅಪಘಾತಕ್ಕೆ ಒಳಗಾದ ಸ್ಕೂಟರೊಂದು ಆಕಸ್ಮಿಕವಾಗಿ ಹೊತ್ತಿ ಉರಿದ ಘಟನೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಉಡುಪಿಯಿಂದ ಜಿಲ್ಲಾಧಿಕಾರಿ ಕಚೇರಿ ಕಡೆಗೆ ಹೋಗುತ್ತಿದ್ದ ಲಾರಿ, ಎದುರಿನಲ್ಲಿ ಬರುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಯಲ್ಲಿ ಪಲ್ಟಿಯಾದ ಸ್ಕೂಟರ್‌ನ ಪೆಟ್ರೋಲ್ ಟ್ಯಾಂಕ್ ಜಖಂಗೊಂಡಿತು. ಇದರ ಪರಿಣಾಮ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತೆನ್ನಲಾಗಿದೆ.

ಸ್ಕೂಟರ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಸ್ಕೂಟರ್ ಸಂಪೂರ್ಣ ಬೆಂಕಿಗೆ ಅಹುತಿಯಾಗಿದ್ದು, ತಕ್ಷಣವೇ ಸಮೀಪದ ಬಟ್ಟೆ ಮಳಿಗೆಯ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News