×
Ad

ಕುಂದಾಪುರ; ಯುವತಿ ಬಳಿ ಮಾತನಾಡಿದ್ದಕ್ಕೆ ಬಸ್ಸಿನಲ್ಲೇ ವಿದ್ಯಾರ್ಥಿಗೆ ಹಲ್ಲೆ: ದೂರು

Update: 2022-02-03 13:11 IST

ಕುಂದಾಪುರ: ಪರಿಚಯದ ಯುವತಿಯ ಜೊತೆ ಮಾತನಾಡಿದ್ದಕ್ಕೆ ಯುವಕನೋರ್ವನಿಗೆ ನಾಲ್ವರು ಯುವಕರು ಬಸ್ಸಿನಲ್ಲೇ‌ ಹಲ್ಲೆ ನಡೆಸಿರುವ ಘಟನೆ ಗುರುವಾರ ಹಾಲಾಡಿ ಸಮೀಪದ ಕಾಸಾಡಿ ಎಂಬಲ್ಲಿ ನಡೆದಿದೆ.

ಬಿದ್ಕಲಕಟ್ಟೆ ಐಟಿಐ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಶಶಾಂಕ್ ಹಲ್ಲೆಗೊಳಗಾದ ಯುವಕ.

ಬೆಳಿಂಜೆ ನಿವಾಸಿ ಶಶಾಂಕ್ ಅವರು ಸ್ನೇಹಿತರಾದ ಪ್ರಜ್ವಲ್, ಗಣೇಶ್ ಜೊತೆ ಬಸ್ಸಿನಲ್ಲಿ ತೆರಳುತ್ತಿರುವಾಗ ನಾಲ್ವರ ತಂಡ ಏಕಾಏಕಿ ಗಲಾಟೆಗಿಳಿದಿದೆ. ಯುವತಿ ಜೊತೆ ಮಾತನಾಡಿದ್ದನ್ನು ಪ್ರಶ್ನಿಸಿ ಶಶಾಂಕ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆ ಮಾಡಿದವರ ಪೈಕಿ ಮೂವರು ಬಸ್ಸಿನಿಂದ ಇಳಿದು ಹೋಗಿದ್ದು ಓರ್ವ ಮಾತ್ರ ಕುಂದಾಪುರದವರೆಗೆ ಬಸ್ಸಿನಲ್ಲೇ ಬಂದಿದ್ದಾನೆ ಎನ್ನಲಾಗಿದೆ. ಗಾಯಾಳು ಯುವಕನಿಗೆ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯುವಕನ ಮೇಲಿನ ಹಲ್ಲೆ ಪ್ರಕರಣದ ಸಂಬಂಧ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಸಿಪಿಐ ಗೋಪಿಕೃಷ್ಣ, ಪಿಎಸ್ಐ ಸದಾಶಿವ ಗವರೋಜಿ ಮೊದಲಾದವರು ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News