×
Ad

​ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲು ಸಂಚಾರದಲ್ಲಿ ವ್ಯತ್ಯಯ

Update: 2022-02-03 21:21 IST
ಸಾಂದರ್ಭಿಕ ಚಿತ್ರ

ಉಡುಪಿ, ಫೆ.3: ದಕ್ಷಿಣ-ಪಶ್ಚಿಮ ರೈಲ್ವೆಯು ಶ್ರವಣಬೆಳಗೊಳ-ಹಾಸನ ಜಂಕ್ಷನ್ ವಿಭಾಗದಲ್ಲಿ ಉನ್ನತೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿರುವುದರಿಂದ ಫೆ.3ರಿಂದ ಮಾ.15ರವರೆಗೆ ಯಶವಂತಪುರ ಹಾಗೂ ಕಾರವಾರ ಎಕ್ಸ್‌ಪ್ರೆಸ್ ರೈಲಿನ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ.

ರೈಲು ನಂ.16515 ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲಿನ ಫೆ.4, ಫೆ.7 ಹಾಗೂ ಫೆ.9ರ ಸಂಚಾರ ಚನ್ನರಾಯಪಟ್ಟಣ ರೈಲು ನಿಲ್ದಾಣದಲ್ಲಿ 35 ನಿಮಿಷ ತಡವಾಗಲಿದೆ. ಅದೇ ರೀತಿ ಫೆ.11, ಫೆ.14, ಫೆ.16 ಹಾಗೂ ಫೆ.18ರ ಇದೇ ರೈಲಿನ ಸಂಚಾರ ಶ್ರವಣಬೆಳಗೊಳ ನಿಲ್ದಾಣದಲ್ಲಿ 80 ನಿಮಿಷ ವಿಳಂಬಗೊಳ್ಳಲಿದೆ.

ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲಿನ ಫೆ.21, ಫೆ.23, ಫೆ.25, ಫೆ.28, ಮಾ.2 ಹಾಗೂ ಮಾ.4ರ ಸಂಚಾರ ಸಮುದ್ರವಲ್ಲಿ ನಿಲ್ದಾಣದಲ್ಲಿ 15 ನಿಮಿಷ ವಿಳಂಬಗೊಳ್ಳಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದ್ದು, ಪ್ರಯಾಣಿಕರು ಸಹಕರಿಸುವಂತೆ ವಿನಂತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News