×
Ad

ವೈರಲ್ ವೀಡಿಯೊ: ಮಾಹೆಯಿಂದ ಸ್ಪಷ್ಟನೆ

Update: 2022-02-03 23:02 IST

ಉಡುಪಿ, ಫೆ.3: ಶಿಕ್ಷಣ ಸಂಸ್ಥೆಯೊಂದರ ಸೆಕ್ಯೂರಿಟಿ ಗಾರ್ಡ್‌ಗಳು ವಿದ್ಯಾರ್ಥಿಯ ಬೃಹತ್ ಗಾತ್ರದ ಬ್ಯಾಗ್‌ನಲ್ಲಿ ತಪಾಸಣೆ ಮಾಡುವ ವೇಳೆ ಅದರ ಒಳಗಿನಿಂದ ವಿದ್ಯಾರ್ಥಿನಿಯೊಬ್ಬಳು ಹೊರಗೆ ಬರುವ ವಿಡಿಯೋ ತುಣುಕು ಮಣಿಪಾಲ ಸಂಸ್ಥೆಗೆ ಸೇರಿದ್ದು ಎಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾಹೆಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ನಿರ್ದೇಶಕ ಎಸ್.ಪಿ.ಕಾರ್, ವೈರಲ್ ಆಗಿರುವ ಈ ವೀಡಿಯೋ ತುಣುಕು ಮಣಿಪಾಲ ಸಂಸ್ಥೆಗೆ ಸೇರಿದ್ದಲ್ಲ. 2019ರಿಂದಲೂ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News