ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್: ಕುಂದಾಪುರದ ಕಿರಣ್ ಡ್ರಾಗನ್ ಫಿಸ್ಟ್ ಕರಾಟೆ ಅಕಾಡಮಿಗೆ ಪ್ರಶಸ್ತಿ
ಮೂಡುಬಿದಿರೆ, ಫೆ.5: ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್, ಸ್ವಾಮಿ ಸ್ಟ್ರಾಂತ್ ಟ್ರೈನಿಂಗ್ ಹಾಗೂ ಎಂ.ಕೆ.ಅನಂತರಾಜ್ ಕಾಲೇಜು ಆಫ್ ಫಿಸಿಕಲ್ ಎಜುಕೇಶನ್ ಸಹಭಾಗಿತ್ವದಲ್ಲಿ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 6ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಕುಂದಾಪುರದ ಕಿರಣ್ ಡ್ರಾಗನ್ ಫಿಸ್ಟ್ ಕರಾಟೆ ಅಕಾಡಮಿ ಚಾಂಪಿಯನ್ ಶಿಪ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ರಝಾ ನಗರದ ಬುರೂಜ್ ಆಂಗ್ಲ ಮಾಧ್ಯಮ ಶಾಲೆ ರನ್ನರ್ಸ್ ಪ್ರಶಸ್ತಿ ಹಾಗೂ ಮಂಗಳೂರಿನ ಪೀಸ್ ಪಬ್ಲಿಕ್ ಸ್ಕೂಲ್, ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್, ನ್ಯೂ ಬೀ ಶಾಲೆ, ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಶಾಲೆ, ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆ, ಎಕ್ಸಲೆಂಟ್ ಶಾಲೆ ಉತ್ತಮ ಪ್ರದರ್ಶನವನ್ನು ನೀಡಿ ಹಲವು ಪದಕಗಳನ್ನು ತಮ್ಮದಾಗಿಸಿ ಉತ್ತಮ ಸಪೋರ್ಟಿಂಗ್ ತಂಡ ಪ್ರಶಸ್ತಿಯನ್ನು ಗಳಿಸಿದವು.
ಈ ಪಂದ್ಯಾವಳಿಯ ಉದ್ಘಾಟನೆಯನ್ನು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ನೆರವೇರಿಸಿದರು. ಎಂ.ಕೆ.ಅನಂತರಾಜ್ ಕಾಲೇಜು ಫಿಸಿಕಲ್ ಎಜುಕೇಶನ್ ಇದರ ಪ್ರಾಂಶುಪಾಲ ಧನಂಜಯ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಬುಲ್ ಆಲಾ ಪುತಿಗೆ, ಸಿ.ಎಚ್.ಗಫೂರ್, ಸೀತಾರಾಮ್ ಆಚಾರ್ಯ,ಮೂಡುಬಿದಿರೆ ಸ್ವಾಮಿ ಪ್ರಸಾದ್, ಸತೀಶ್ ಬೆಳ್ಮಣ್, ಕಿರಣ್ ಕುಂದಾಪುರ, ರವಿ ಸಾಲ್ಯಾನ್, ಸುರೇಂದ್ರ, ಸಫ್ರಾಝ್, ರಹ್ಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.