ಉಳ್ಳಾಲ ಕಡಲ ತೀರ ಸ್ವಚ್ಛತಾ ಕಾರ್ಯಕ್ರಮ
Update: 2022-02-06 14:26 IST
ಉಳ್ಳಾಲ: ದ.ಕ. ಜಿಲ್ಲಾ ಗೃಹರಕ್ಷಕ ದಳ ಉಳ್ಳಾಲ ಘಟಕದ ವತಿಯಿಂದ ಕಡಲ ತೀರ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ರವಿವಾರ ಬೆಳಗ್ಗೆ ಉಳ್ಳಾಲ ಬೀಚ್ ನಲ್ಲಿ ನಡೆಯಿತು.
ದ ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ. ಮುರಲಿ ಮೋಹನ್ ಚೂಂತಾರು ಅವರ ನೇತೃತ್ವದಲ್ಲಿ ನಡೆದ ಈ ಆಂದೋಲನದಲ್ಲಿ ಉಳ್ಳಾಲ ಘಟಕದ 25 ಮಂದಿ ಗೃಹ ರಕ್ಷಕ ದಳದ ಸದಸ್ಯರು ಈ ಸ್ವಚ್ಚತಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.