×
Ad

ಯುವ ಜನತೆಗಾಗಿ ಅಭಿವಿನ್ಯಾಸ ಕಾರ್ಯಕ್ರವು

Update: 2022-02-06 17:39 IST

ಉಡುಪಿ, ಫೆ.6: ಉಡುಪಿ ನೆಹರು ಯುವ ಕೇಂದ್ರ, ಮೂಡುಬೆಟ್ಟು ಯುವಕ ಮಂಡಲ, ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಧನ್ವಂತರಿ ನರ್ಸಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಯುವ ಜನತೆಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ಫೆ.5ರಂದು ಧ್ವನಂತರಿ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉಡುಪಿ ನಗರಸಭಾ ಅಧ್ಯಕ್ಷ ಸುಮಿತ್ರಾ ಆರ್.ನಾಯಕ್ ಉದ್ಘಾಟಿಸಿದರು. ಸುಬ್ರಹ್ಮಣ್ಯ ನಗರದ ನಗರಸಭಾ ಸದಸ್ಯ ಜಯಂತಿ ಕೆ. ಪೂಜಾರಿ, ಧನ್ವಂತರಿ ಕಾಲೇಜಿನ ಪ್ರಾಂಶುಪಾಲೆ ಯಶೋಧ ಸಾಲಿಯಾನ್, ಆಡಳಿತಾಧಿಕಾರಿ ಉದಯ ಕುಮಾರ್ ಹಾಗೂ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿ ಕಾರಿ ಶಿವಪ್ರಸಾದ್ ಪ್ರಭು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ಜೆಸಿಐ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು, ಯುವಜನತೆ ಹಾಗೂ ನಾಯಕತ್ವ, ಡಾ.ಎ.ವಿ.ಬಾಳಿಗ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಮದ್ಯ, ಮಾದಕ ವ್ಯಸನ ಹಾಗೂ ಯುವಜನತೆ, ಡಾ.ಎ.ವಿ.ಬಾಳಿಗ ಸಂಸ್ಥೆಯ ಸಮುದಾಯ ಕಾರ್ಯನಿರ್ವಾಹಕ ಸುರೇಶ್ ಎಸ್.ನಾವೂರು ಸ್ವಾವಲಂಬಿ ಬದುಕು ಎಂಬ ವಿಷಯಗಳ ಬಗ್ಗೆ ಮಾತ ನಾಡಿದರು.

ಮೂಡಬೆಟ್ಟು ಯುವಕ ಮಂಡಲದ ಅಧ್ಯಕ್ಷ ಜಗದೀಶ್ ಅಮೀನ್, ಗೌರವ ಅಧ್ಯಕ್ಷ ಸುಧೀಶ್ ಕುಮಾರ್ ಹಾಗೂ ಸದಸ್ಯರು ಸಹಕರಿಸಿದರು. ನೆಹರು ಯುವಕ ಕೇಂದ್ರ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೇಡ್ ಡಿಸೋಜ ಪ್ರಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ್ ಸ್ವಾಗತಿಸಿ, ಶಿವಕುಮಾರ್ ವಂದಿಸಿದರು. ರಕ್ಷಿತ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News