×
Ad

ಲತಾ ಮಂಗೇಶ್ಕರ್‌ ಪಾರ್ಥಿವ ಶರೀರದ ಬಳಿ ಶಾರೂಕ್‌ ಖಾನ್‌ ಉಗುಳಿದ್ದಾರೆಂದು ಅಪಪ್ರಚಾರ ಮಾಡುತ್ತಿರುವ ಬಲಪಂಥೀಯರು!

Update: 2022-02-06 23:44 IST
Photo: Twitter

ಹೊಸದಿಲ್ಲಿ: ಭಾರತ ರತ್ನ ಲತಾ ಮಂಗೇಶ್ಕರ್‌ ಅವರ ಮೃತದೇಹವನ್ನು ರವಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ. ಲತಾ ಅವರ ಪಾರ್ಥಿವ ಶರೀರಕ್ಕೆ ಹಲವು ಗಣ್ಯರು ಗೌರವಾರ್ಪಣೆ ಸಲ್ಲಿಸಿದ್ದಾರೆ.

ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರೂಕ್‌ ಖಾನ್‌ ಮತ್ತು ಅವರ ಮೆನೇಜರ್‌ ಪೂಜಾ ದದ್ಲಾನಿ ಕೂಡಾ ಗಾನ ಕೋಗಿಲೆಗೆ ಅಂತಿಮ ನಮನ ಸಲ್ಲಿಸಿದ್ದು, ಶಾರೂಕ್‌ ಮುಸ್ಲಿಂ ಸಂಪ್ರದಾಯದಂತೆ ದುಆ ಮಾಡಿದ್ದರೆ, ಪೂಜಾ ಹಿಂದೂ ಸಂಪ್ರದಾದಂತೆ ನಮಸ್ಕರಿಸಿದ್ದಾರೆ.

ಇವರಿಬ್ಬರು ಎರಡೂ ಧರ್ಮದ ಸಂಪ್ರದಾಯಗಳಂತೆ ಅಂತಿಮ ನಮನ ಸಲ್ಲಿಸಿದ್ದು ವ್ಯಾಪಕ ವೈರಲ್‌ ಆಗಿತ್ತು.  ಪೂಜಾ ಹಾಗೂ ಶಾರೂಖ್‌ ಒಟ್ಟಿಗೆ ವಂದಿಸುವ ಫೋಟೋವನ್ನು ಇದು ನಮ್ಮ ಭಾರತದ ಸೌಂದರ್ಯ ಎಂದು ಹಲವರು ಹಂಚಿಕೊಂಡಿದ್ದರು.

ಆದರೆ, ಇದನ್ನು ಸಹಿಸದ ಬಲಪಂಥೀಯ ಟ್ರಾಲ್‌ ಪಡೆಗಳು ಶಾರೂಖ್‌ ಖಾನ್‌ ಲತಾ ಮಂಗೇಷ್ಕರ್‌ ಪಾರ್ಥೀವ ಶರೀರರದ ಬಳಿ ಉಗುಳಿದ್ದಾರೆ ಎಂದು ಅಪಪ್ರಚಾರ ನಡೆಸಿದ್ದಾರೆ. ತೀರಾ ಕೊಳಕು ಮಟ್ಟದ ಭಾಷೆಗಳಿಂದ ಶಾರೂಕ್‌ ಖಾನ್‌ರನ್ನು ನಿಂದಿಸುತ್ತಿದ್ದಾರೆ.

ಅದಾಗ್ಯೂ, ನೆಟ್ಟಿಗರು ಬಲಪಂಥೀಯ ಟ್ರಾಲರ್‌ಗಳನ್ನು ತರಾಟೆಗೆ ತೆಗೆದಿದ್ದು, ಶಾರೂಕ್‌ ಉಗುಳಿದ್ದಾರೆ ಎಂದು ಪ್ರಚಾರ ನಡೆಸುತ್ತಿರುವುದರ ವಿರುದ್ಧ ನಿಜಾಂಶವನ್ನು ಅರ್ಥ ಮಾಡಿಸಲು ಪ್ರಯತ್ನಿಸಿದ್ದಾರೆ.

ಸಾಮಾನ್ಯವಾಗಿ, ಮುಸ್ಲಿಮರು ಕುರಾನ್‌ ಪಾರಾಯಣ ಮತ್ತು ಪ್ರಾರ್ಥಿಸಿದ ಬಳಿಕ ಬಾಯಿಯಿಂದ ಊದುವುದು ಸಹಜ. ಇದನ್ನು ಬಹುತೇಕ ಮುಸ್ಲಿಮರು ಮಾಡುತ್ತಾರೆ. ಅದು ಉಗುಳುತ್ತಿರುವುದಲ್ಲ ಎಂದು ಹೇಳಿದ್ದಾರೆ.

ಬಲಪಂಥೀಯ ವಿಕೃತರು ಹಂಚಿಕೊಂಡ ವಿಡಿಯೋದಲ್ಲೂ ಉಗುಳುವುದು ಕಂಡು ಬರುತ್ತಿಲ್ಲ. ಬದಲಾಗಿ ಮಾಸ್ಕ್‌ ಕಳಚಿ, ಶಾರೂಖ್‌ ಬಾಯಿಯಿಂದ ಊದುವುದು ಕಂಡು ಬರುತ್ತದೆ. ಆದರೆ, ಬಲಪಂಥೀಯ ಟ್ರಾಲ್‌ ಪಡೆ ಶಾರೂಕ್‌ ಮೇಲಿನ ಧ್ವೇಷದಿಂದ ಊದುವುದನ್ನು ಉಗುಳುವುದು ಎಂದು ಪ್ರಚಾರ ಮಾಡುತ್ತಿದ್ದಾರೆ.

ಈ ಹಿಂದೆ ಮುಸ್ಲಿಂ ಧಾರ್ಮಿಕ ವಿಧ್ವಾಂಸರೊಬ್ಬರು ಹೀಗೆಯೇ ಆಹಾರದ ಮುಂದೆ ಪ್ರಾರ್ಥಿಸಿ ಊದುತ್ತಿರುವುದನ್ನು ಆಹಾರದ ಮೇಲೆ ಉಗುಳುತ್ತಿದ್ದಾರೆ ಎಂದು ವ್ಯಾಪಕ ಅಪಪ್ರಚಾರ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News