×
Ad

ಸುರತ್ಕಲ್: ಎರಡನೆ ದಿನಕ್ಕೆ ಕಾಲಿಟ್ಟ ಟೋಲ್ ಗೇಟ್ ವಿರುದ್ಧ ಧರಣಿ

Update: 2022-02-08 12:16 IST

ಸುರತ್ಕಲ್ : ರಾಷ್ಟ್ರೀಯ ಹೆದ್ದಾರಿ 66ರ ಎನ್ಐಟಿಕೆ ಬಳಿಯಿರುವ ಟೋಲ್ ಗೇಟ್ ವಿರುದ್ಧದ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.

"ಹತ್ತು ಕಿಲೋಮೀಟರ್ ಅಂತರದಲ್ಲಿ ಎರಡು ಟೋಲ್ ಪಾವತಿಸಬೇಕೇ.?", ತಾತ್ಕಾಲಿಕ ನೆಲೆಯಲ್ಲಿ ಸ್ಥಾಪಿಸಿದ ಈ ಅಕ್ರಮ ಸುಲಿಗೆ ಕೇಂದ್ರವನ್ನು ಸ್ಥಗಿತಗೊಳಿಸಬೇಕು, ಇಲ್ಲವೇ, ಹೆಜಮಾಡಿಯಲ್ಲಿ ಟೋಲ್ ಶುಲ್ಕ ನೀಡಿ ಬರುವ ವಾಹನಗಳಿಗೆ ಇಲ್ಲಿ ಉಚಿತ ಪ್ರವೇಶ ನೀಡಬೇಕು ಎಂಬುದು ಧರಣಿನಿರತರ ಆಗ್ರಹವಾಗಿದೆ.

ಅಹೋರಾತ್ರಿ ಧರಣಿ ಪ್ರತಿಭಟನೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಟೆಂಪೋ, ಟ್ಯಾಕ್ಸಿ ಯೂನಿಯನ್ ಗಳು, ಲಾರಿ, ಟಿಪ್ಪರ್, ಬಸ್ಸು ಮಾಲಕರ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕ, ಸಾಮಾಜಿಕ ಕಾರ್ಯಕರ್ತರು ಭಾಗಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News