×
Ad

ತೊಕ್ಕೊಟ್ಟು: ಎಟಿಎಂನಿಂದ ದರೋಡೆಗೆ ಯತ್ನ: ಆರೋಪಿ ಪೊಲೀಸ್ ವಶಕ್ಕೆ

Update: 2022-02-09 09:14 IST

ಮಂಗಳೂರು, ಫೆ.9: ತೊಕ್ಕೊಟ್ಟು ಬಳಿಯ ಎಟಿಎಂ ದರೋಡೆ ಯತ್ನ ಮಂಗಳವಾರ ತಡರಾತ್ರಿ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಕಳವಿಗೆ ಯತ್ನಿಸಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಶಕ್ಕೆ ಪಡೆಯಲಾದ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಬಚ್ಚನಹಳ್ಳಿ ನಿವಾಸಿ ಬೀರಪ್ಪ ಎಂದು ಗುರುತಿಸಲಾಗಿದೆ.

ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ತೊಕ್ಕೊಟ್ಟು ಬಳಿಯ ಬ್ಯಾಂಕ್ ಆಫ್ ಬರೋಡಾದ ಎಟಿಎಂನ ಬಾಗಿಲು ಒಡೆಯುವ ಯತ್ನ ನಡೆದಿದೆ. ಈ ವಿಚಾರ ಬ್ಯಾಂಕ್ ನ ವಿಚಕ್ಷಣ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಟಿಎಂನಿಂದ ನಗದು ಕಳವು ಆಗಿಲ್ಲ, ಆದರೆ ಕಳವಿಗೆ ಪ್ರಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News