×
Ad

ಆತ್ಮಕಥನಗಳಲ್ಲಿ ಶಾಲಾ ಶಿಕ್ಷಣ ಪುಸ್ತಕ ಪರಿಚಯ ಕಾರ್ಯಕ್ರಮ

Update: 2022-02-09 21:38 IST

ಉಡುಪಿ, ಫೆ.9: ಹಿರಿಯ ಶಿಕ್ಷಕ ಡಾ.ಅಶೋಕ್ ಕಾಮತ್ ಬರೆದಿರುವ ‘ಆತ್ಮಕಥನಗಳಲ್ಲಿ ಶಾಲಾ ಶಿಕ್ಷಣ’ ಕೃತಿ ಪರಿಚಯ ಕಾರ್ಯಕ್ರಮ ಇದೇ ಫೆ.12ರ ಶನಿವಾರ ಅಪರಾಹ್ನ 3 ಗಂಟೆಗೆ ಅಂಬಲಪಾಡಿಯ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ.

ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಡುಪಿಯ ಸಾಫಲ್ಯ ಟ್ರಸ್ಟ್‌ನ ಅಧ್ಯಕ್ಷೆ ನಿರುಪಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ತುಮಕೂರು ನ್ಯಾಯಾಲಯದ ಶಿರಸ್ತೇದಾರ್ ಡಾ.ರಾಮಕೃಷ್ಣ ಭಟ್ ಹಾಗೂ ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದ ಉಪನ್ಯಾಸಕ ಓ.ಆರ್.ಪ್ರಕಾಶ್ ಪುಸ್ತಕವನ್ನು ಪರಿಚಯಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ನಿಕೇತನ ಹಾಗೂ ಡಯಟ್ ಉಡುಪಿ ಇದರ ಉಪ ಪ್ರಾಂಶುಪಾಲ ಡಾ.ಅಶೋಕ ಕಾಮತ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News