ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಯುವಕನಿಗೆ ಚೂರಿ ಇರಿತ
Update: 2022-02-10 16:51 IST
ಉಳ್ಳಾಲ: ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಗೆ ಚೂರಿಯಿಂದ ಇರಿದ ಘಟನೆ ಇಲ್ಲಿನ ಠಾಣೆ ವ್ಯಾಪ್ತಿಯ ಆಝಾದ್ ನಗರದ ಬಳಿ ಬುಧವಾರ ತಡರಾತ್ರಿ ನಡೆದಿದೆ.
ಚೂರಿ ಇರಿತಕ್ಕೊಳಗಾದವರನ್ನು ಮೇಲಂಗಡಿ ನಿವಾಸಿ ತನ್ವೀರ್ (24) ಎಂದು ಗುರುತಿಸಲಾಗಿದೆ.
ಉಪ್ಪಳ ನಿವಾಸಿ ಖಾದರ್ ಚೂರಿಯಿಂದ ಇರಿದ ಆರೋಪಿ ಎಂದು ದೂರಲಾಗಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಬುಧವಾರ ತಡರಾತ್ರಿ ಕೇರಳ ನೋಂದಣಿ ಕಾರ್ ನಲ್ಲಿ ಬಂದ ಆರೋಪಿ ಖಾದರ್ ಚೂರಿಯಿಂದ ಇರಿದು ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಕಾರು ಮರಕ್ಕೆ ಗುದ್ದಿದೆ. ಈ ಹಿನ್ನೆಲೆಯಲ್ಲಿ ಆತ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯಿಂದಾಗಿ ತನ್ವೀರ್ ಅವರ ಎದೆ ಹಾಗೂ ಕೈಗೆ ಗಾಯವಾಗಿದ್ದು, ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ತನ್ವೀರ್ ತಂದೆ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ