×
Ad

ಹೈಕೋರ್ಟ್ ತೀರ್ಪು ಬರುವವರೆಗೆ ಯಥಾಸ್ಥಿತಿ ಕಾಪಾಡಲು ಡಿವೈಎಫ್‌ಐ ಆಗ್ರಹ

Update: 2022-02-10 21:35 IST

ಮಂಗಳೂರು, ಫೆ.10: ಹಿಜಾಬ್ ವಿಷಯ ಮುಂದಿಟ್ಟು ವಿದ್ಯಾರ್ಥಿಗಳ ಮಧ್ಯೆ ಒಡಕು ಮೂಡಿಸುವುತ್ತಿರುವುದನ್ನು ತಡೆಯಲು ಹಾಗೂ ರಾಜ್ಯ ಹೈಕೋರ್ಟ್‌ನ ತೀರ್ಪು ಬರುವವರೆಗೆ ಈ ಮೊದಲಿದ್ದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಮತ್ತು ಈ ಅನಗತ್ಯ ವಿವಾದವನ್ನು ನಿಲ್ಲಿಸಲು ರಾಜ್ಯ ಸರಕಾರವು ಮಧ್ಯಪ್ರವೇಶಿಸಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮತ್ತು ಕಾರ್ಯದರ್ಶಿ ಬಸವರಾಜ ಪೂಜಾರ ಒತ್ತಾಯಿಸಿದ್ದಾರೆ.

ಶಿಕ್ಷಣ ಕೊಡುವುದು ಸರಕಾರದ ಪ್ರಥಮ ಆದ್ಯತೆ ಆಗಬೇಕಿದೆ. ಈಗೀಗ ಶಿಕ್ಷಣ ಪಡೆಯಲು ಮುಸ್ಲಿಂ ಹೆಣ್ಣುಮಕ್ಕಳು ಮುಕ್ತವಾಗಿ ಹೊರಬರುವ ಸಮಯದಲ್ಲಿ, ಇದುವರೆಗೂ ಇರದ ಈ ತರಹದ ಸಮಸ್ಯೆಯನ್ನು ಇದ್ದಕ್ಕಿದ್ದಂತೆ ವ್ಯವಸ್ಥಿತವಾಗಿ ಸೃಷ್ಠಿಸಿ, ಶಿಕ್ಷಣದಿಂದ ಈ ಹೆಣ್ಮಕ್ಕಳನ್ನು ದೂರವಿಡುವ ದುಷ್ಟ ರಾಜಕೀಯ ಅಜೆಂಡಾವು ಈ ಕೋಮುವಾದಿ ಚಟುವಟಿಕೆಯ ಹಿಂದಿರುವುದು ಬಹಳ ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News