ಬಂಟ್ವಾಳ : ಬಾರ್ ನಲ್ಲಿ ಇಬ್ಬರಿಗೆ ಚೂರಿ ಇರಿತ
Update: 2022-02-11 18:53 IST
ಬಂಟ್ವಾಳ, ಫೆ.11: ಬಾರೊಂದರಲ್ಲಿ ಕುಡಿದ ನಂತರ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಬಳಿಕ ಚೂರಿ ಇರಿತಕ್ಕೊಳಗಾಗಿ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಬೈಪಾಸ್ ಜಂಕ್ಷನ್ ಬಳಿ ಶುಕ್ರವಾರ ನಡೆದಿದೆ.
ಯಾವುದೋ ಕ್ಷುಲಕ ಕಾರಣಕ್ಕೆ ಯುವಕರ ಮಧ್ಯೆ ಜಗಳ ನಡೆದಿದ್ದು ಈ ವೇಳೆ ಚೂರಿಯಿಂದ ಇರಿದುಕೊಂಡಿದ್ದಾರೆ ಎನ್ನಲಾಗಿದೆ. ಇರಿತದ ಪರಿಣಾಮ ಕಿಶೋರ್ ಹಾಗೂ ದಯಾನಂದ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಕರಣದ ಆರೋಪಿಗಳಾದ ಅರ್ಬಿಗುಡ್ಡೆ ನಿವಾಸಿಗಳಾದ ಸುಚಿತ್, ಸಚಿನ್, ಧನು ಹಾಗೂ ಪುರುಷ ವಿರುದ್ಧ ದೂರು ದಾಖಲಾಗಿದೆ.