ಉಳ್ಳಾಲ ಉರೂಸ್: ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ
ಉಳ್ಳಾಲ, ಫೆ.11: ಉಳ್ಳಾಲ ಸೈಯದ್ ಮದನಿ ತಂಙಳ್‌ರ 429ನೇ ವಾರ್ಷಿಕ ಹಾಗೂ 21ನೇ ಪಂಚ ವಾರ್ಷಿಕ ಉರೂಸ್ ಪ್ರಯುಕ್ತ ಎರಡನೇ ದಿನದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ವನ್ನು ಶುಕ್ರವಾರ ಸೈಯದ್ ಅಕ್ರಂ ತಂಙಳ್ ಪುತ್ತೂರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ಪ್ರಾರ್ಥನೆಯು ಭಯ ಭಕ್ತಿಯಿಂದ ಕೂಡಿರಲಿ ಎಂದರು.
ಸೈಯದ್ ಅಥಾವುಲ್ಲ ತಂಙಳ್ ದುಆ ನೆರವೇರಿಸಿ ಮಾತನಾಡಿ, ಉರೂಸ್‌ನ ಯಶಸ್ಸಿಗೆ ನಾವೆಲ್ಲ ಕೈಜೋಡಿಸ ಬೇಕು ಎಂದು ಕರೆ ನೀಡಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾ ಡಿದ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಧಾರ್ಮಿಕ ಉಪನ್ಯಾಸ ಕೇಳಿದರೆ ಸಾಲದು. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೈಯದ್ ಇಂಬಿಚ್ಚಿಕೋಯ ತಂಙಳ್, ಕೇಂದ್ರ ಜುಮಾ ಮಸೀದಿಯ ಇಮಾಮ್ ಅನ್ವರ್ ಅಲಿ, ಇಬ್ರಾಹೀಂ ಬಾಫಕಿ ತಂಙಳ್, ಇಬ್ರಾಹೀಂ ಮದನಿ, ಬಾಸಿತ್ ಮದನಿ, ಕೆ.ಎಂ.ಖಾಸಿಂ ದಾರಿಮಿ ಸವಣೂರು, ಉಸ್ಮಾನ್ ಫೈಝಿ ತೋಡಾರ್, ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ಎಂ.ಎಚ್. ಇಬ್ರಾಹೀಂ, ಯು.ಟಿ.ಇಲ್ಯಾಸ್, ಇಬ್ರಾಹೀಂ ಅಹ್ಸನಿ, ಯು.ಕೆ.ಮೋನು, ಪ್ರಚಾರ ಸಮಿತಿಯ ಸಂಚಾಲಕ ಆಸಿಫ್ ಅಬ್ದುಲ್ಲಾ, ಇಬ್ರಾಹೀಂ ಅಳೇಕಲ, ಫಾರೂಕ್ ಚೆಂಬುಗುಡ್ಡೆ, ಹನೀಫ್ ಹಾಜಿ, ಹಮೀದ್ ಕೋಡಿ ಮಾರ್ಗತಲೆ ಮತ್ತಿತರರು ಉಪಸ್ಥಿತರಿದ್ದರು.