×
Ad

ಸೂರಿಂಜೆ : 'ಮೀಫ್' ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Update: 2022-02-12 13:39 IST

ಸೂರಿಂಜೆ : ಮುಸ್ಲಿಂ ಎಜುಕೇಶನಲ್ ಇನ್ಸ್ಟಿಟ್ಯೂಷನ್ ಫೆಡರೇಶನ್ (ಮೀಫ್) ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿ ಗಳಿಗೆ ಪರೀಕ್ಷೆ ಎದುರಿಸುವ ವಿಧಾನಗಳ ಬಗ್ಗೆ ಕಾರ್ಯಾಗಾರವು ಸೂರಿಂಜೆ ಹಿದಾಯತ್ ಹೈಸ್ಕೂಲ್‌ನಲ್ಲಿ ಶನಿವಾರ ನಡೆಯಿತು.

ಸೂರಿಂಜೆ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಝಾಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. 'ಮೀಫ್' ಒಕ್ಕೂಟದ ಅಧ್ಯಕ್ಷರಾದ ಮೂಸಬ್ಬ ಪಿ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿದಾಯತ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಹಾಜಿ ಟಿ.ಸೆಯ್ಯದ್, ಮೀಫ್ ಪ್ರಧಾನ ಕಾರ್ಯದರ್ಶಿ ಬಿ.ಎ. ನಝೀರ್, ಮುಖ್ಯೋಪಾಧ್ಯಾಯಿನಿ ಜಯಂತಿ ಕೆ., ಜಮಾಅತ್ ಅಧ್ಯಕ್ಷಾದ ಹಾಜಿ ಜಲೀಲ್ ಸೂರಿಂಜೆ, ಕೆ.ಎ. ಅಬ್ದುಲ್ಲಾ ಕಾರ್ಯಕ್ರಮ ಸಂಯೋಜಕರು, ಇಕ್ಬಾಲ್ ಕೃಷ್ಣಾಪುರ,  ಬಿ.ಎಚ್ ಸೂರಿಂಜೆ, ಕಾದರ್ ಮಿಲನ್, ಟಿ.ಇಸ್ಮಾಯಿಲ್, ಅಂಜುಮಾನ್ ಅಧ್ಯಕ್ಷರಾದ ಹಾಜಿ ಸಿರಾಜ್ ಜೋಕಟ್ಟೆ, ಹಾಜಿ ಟಿ.ಅಬೂಬಕರ್, ಪಿ.ಎ ಇಲ್ಯಾಸ್ ಹಾಗೂ ಇತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ತರಬೇತುದಾರರಾದ ಜೆ.ಸಿ ರಾಜೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ನೂರುಲ್ ಹುದಾ ಕಾಟಿಪಳ್ಳ, ಜಾಮಿಯಾ ಕೃಷ್ಣಾಪುರ, ಅಂಜುಮಾನ್ ಜೋಕಟ್ಟೆ ಮತ್ತು ಹಿದಾಯತ್ ಸೂರಿಂಜೆ ಪ್ರೌಢ ಶಾಲೆಗಳ 177 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜಿಲ್ಲೆಯ ವಿವಿಧ ಕಡೆ 'ಮೀಫ್' ಹಮ್ಮಿಕೊಂಡಿರುವ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ವಿಧಾನಗಳ ಬಗ್ಗೆ ಕಾರ್ಯಾಗಾರ ನಡೆಯುತ್ತಿದ್ದು, ಈ ಪೈಕಿ ಇಂದು ಸೂರಿಂಜೆ ಹಿದಾಯತ್ ಹೈಸ್ಕೂಲ್‌ನಲ್ಲಿ ತರಬೇತಿ  ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News