ಮಂಗಳೂರು: ಪಂಪ್ ವೆಲ್-ಪಡೀಲ್ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಗೆ ಸಂಸದ ನಳಿನ್ ಚಾಲನೆ
ಮಂಗಳೂರು: ಪಂಪ್ ವೆಲ್ ನಿಂದ ಪಡೀಲ್ ವರೆಗಿನ 26 ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ನಗರದ ಕಪಿತಾನಿಯಾ ಬಳಿ ಇಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮನಪಾ ಮೇಯರ್ ಪ್ರೇಮಾ ನಂದ ಶೆಟ್ಟಿ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೈಸೂರು ಎಲೆಕ್ಟ್ರಾನಿಕ್ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂತೋಷ್ ಕುಮಾರ್ ಬೊಳಿಯಾರ್,ಮನಪಾ ಸದಸ್ಯ ರಾದ ಸಂದೀಪ್ ಗರೋಡಿ,ರೂಪಶ್ರೀ ಪೂಜಾರಿ, ಶೋಭಾ ಪೂಜಾರಿ, ಪ್ರವೀಣ್ ಚಂದ್ರ ಆಳ್ವ,ಕೇಶವ ಮರೋಳಿ,ಸುಧೀರ್ ಶೆಟ್ಟಿ ,ಮಾಜಿ ಮನಪಾ ಮೇಯರ್ ದಿವಾಕರ ಪಾಂಡೇಶ್ವರ, ಮಾಜಿ ಮನಪಾ ಸದಸ್ಯ ರಾದ ವಿಜಯ ಕುಮಾರ್ ಶೆಟ್ಟಿ,ಆಶಾ ಡಿ ಸಿಲ್ವ,ಜೇಮ್ಸ್ ಡಿ ಸೋಜ,ಭಾಸ್ಕರ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.
ಪಂಪ್ ವೆಲ್ -ಪಡೀಲ್ ಸ್ಮಾರ್ಟ್ ಸಿಟಿ ಕಾಂಕ್ರೀಟ್ ರಸ್ತೆ ಯೋಜನೆ: ಮಂಗಳೂರು ನಗರದ 48 ಕಂಕನಾಡಿ ವೆಲೆನ್ಸಿಯಾ, 49 ಕಂಕನಾಡಿ, 50 ಅಳಪೆ-ದಕ್ಷಿಣ, 51 ಅಳಪೆ-ಉತ್ತರ ವಾರ್ಡಿನ ಪಂಪ್‌ವೆಲ್-ಪಡೀಲ್ ರಸ್ತೆಯು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಿಂದ ಮಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಸದ್ರಿ ರಸ್ತೆಯು 10 ಮೀ ಅಗಲ ಡಾಮರೀಕರಿಸಿದ ರಸ್ತೆಯಾಗಿರುತ್ತದೆ. ಈ ರಸ್ತೆಯನ್ನು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 24 ಮೀ ಅಗಲ, ಕಾಂಕ್ರೀಟ್ ರಸ್ತೆಯಾಗಿ ಪ್ಯಾಕೇಜ್-5ರ ಅಡಿಯಲ್ಲಿ ಸ್ಮಾರ್ಟ್ ರಸ್ತೆಯಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ.
ಪ್ರಸ್ತಾಪಿತ ರಸ್ತೆಯನ್ನು ಪಂಪ್ ವೆಲ್-ಪಡೀಲ್-2800ಮೀ ಉದ್ದಕ್ಕೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಪ್ರಸ್ತಾವಿತ ರಸ್ತೆಯು 24ಮೀ ಅಗಲವಿದೆ, ಸದ್ರಿ ರಸ್ತೆಯಲ್ಲಿ 3.50 ಮೀಟರ್ ಅಗಲದ 4 ಲೇನ್ ಕಾಂಕ್ರೀಟ್‌ವೇ, ರಸ್ತೆಯ ಇಕ್ಕೆಲಗಳಲ್ಲಿ ತಿಮೀಟರ್ ಅಗಲದ ಇಂಟರ್‌ಲಾಕ್ ಅಳವಡಿಸಲಾಗುವುದು. ಹಾಗೂ ರಸ್ತೆಯ ಎರಡು ಇಕ್ಕೆಲಗಳಲ್ಲಿ ಮಳೆನೀರು ಚರಂಡಿ, ಯುಟಿಲಿಟಿ ಡಕ್ಟ್, ಪಾದಚಾರಿಗಳ ಮಾರ್ಗವನ್ನು ಹಾಗೂ ರಸ್ತೆಯ ಮಧ್ಯಭಾಗದಲ್ಲಿ ಮೀಡಿಯನ್ ಜೊತೆ ವಿದ್ಯುತ್ ದಾರಿದೀಪ ಅಳವಡಿಕೆ ನಿರ್ಮಿಸಲಾಗುವುದು.