×
Ad

ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Update: 2022-02-14 22:36 IST

ಮಂಗಳೂರು, ಫೆ.15: ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವಾರ್ಷಿಕ ಮಹಾಸಭೆಯು ಫೆ.13ರಂದು ಸುನ್ನಿ  ಸೆಂಟರ್ ಬೆಳರಿಂಗೆ ಕಿನ್ಯದಲ್ಲಿ ನಡೆಯಿತು.

ಸೆಕ್ಟರ್ ಅಧ್ಯಕ್ಷ ನೌಫಲ್ ಅಹ್ಸನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.  ಕೆಸಿಎಫ್ ಅಂತ ರಾಷ್ಟ್ರೀಯ ನಾಯಕ, ಮಲ್ಜಾಅ್ ಸಂಸ್ಥೆಯ ವ್ಯವಸ್ಥಾಪಕ ಮೆಹಬೂಬ್ ಸಖಾಫಿ ಕಿನ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಳ್ಳಾಲ ಡಿವಿಷನ್ ಅಧ್ಯಕ್ಷ ಜುನೈದ್ ಸಖಾಫಿ ತರಬೇತಿಯನ್ನು ನಡೆಸಿಕೊಟ್ಟರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ವಾರ್ಷಿಕ ವರದಿ ಮಂಡಿಸಿದರು. ಸೆಕ್ಟರ್ ಕೋಶಾಧಿಕಾರಿ ಹುಸೈನಾರ್ ಮೀಂಪ್ರಿ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿದರು.  ಸಭೆಯಲ್ಲಿ ಡಿವಿಷನ್ ಮಾಜಿ ಅಧ್ಯಕ್ಷ ಇರ್ಫಾನ್ ನೂರಾನಿ ಮಾತನಾಡಿದರು.

ಉಳ್ಳಾಲ ಡಿವಿಷನ್ ಪ್ರ.ಕಾರ್ಯದರ್ಶಿ ಅನ್ವೀಝ್ ಕೆ.ಸಿ. ನಗರ, ಡಿವಿಷನ್ ಕ್ಯಾಂಪಸ್ ಸೆಕ್ರೆಟರಿ ಆಶಿಕ್ ಕಿನ್ಯ ಉಪಸ್ಥಿತರಿದ್ದರು.

ಇದೇ ಸಂದರ್ಭ ನೂತನ ಸಾಲಿನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನೌಫಲ್ ಅಹ್ಸನಿ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಕೂಡಾರ , ಕೋಶಾಧಿಕಾರಿಯಾಗಿ ಅಯ್ಯೂಬ್ ಕುತುಬಿ ನಗರ, ಕಾರ್ಯದರ್ಶಿಗಳಾಗಿ ಸಾದಿಕ್ ಕುರಿಯ (ಕ್ಯಾಂಪಸ್) ಹಾರಿಸ್ ಸಖಾಫಿ ಬೆಳರಿಂಗೆ (ದಅವ), ಇಜಾಝ್ ಕುತುಬಿ ನಗರ (ರೈಂಬೋ)  ಸಫ್ವಾನ್ ಮೀಂಪ್ರಿ (ಕ್ವಾಲಿಟಿ ಡೆವಲಪ್ಮೆಂಟ್) ಇಕ್ಬಾಲ್ ಕುತುಬಿ ನಗರ(ಮೀಡಿಯಾ) ಹುಸೈನಾರ್ ಮೀಂಪ್ರಿ(ಪಬ್ಲಿಕೇಶನ್)  ಉನೈಸ್ ಮೀಂಪ್ರಿ(ವಿಸ್ಡಂ) ಜಾಬಿರ್ ಬೆಳರಿಂಗೆ(ಕಲ್ಚರಲ್ ಕೌನ್ಸಿಲ್) ಆಯ್ಕೆಯಾದರು ಹಾಗೂ ಇತರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ವೀಕ್ಷಕರಾಗಿ ಸೆಕ್ಟರ್ ಉಸ್ತುವಾರಿ ಮುಸ್ತಫ ಅಜ್ಜಿನಡ್ಕ ಆಗಮಿಸಿದ್ದರು.

ಸಭೆಯಲ್ಲಿ ರಾಜ್ಯ ಮಟ್ಟದ ಪ್ರತಿಭೋತ್ಸವದಲ್ಲಿ  ಇಂಗ್ಲೀಷ್ ಭಾಷಣ ಹಾಗೂ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಈದ್ ಕೆ.ಎಂ. ಮತ್ತು ರಾಜ್ಯ ಮಟ್ಟದ ಪ್ರತಿಭೋತ್ಸವದಲ್ಲಿ ಕವನ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಿದ ನೌಫಲ್ ಬೆಳರಿಂಗೆ ಹಾಗೂ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಜಾಫರ್ ಅಹ್ಮದ್ ಕುತುಬಿ ನಗರ ಅವರನ್ನು ಸನ್ಮಾನಿಸಲಾಯಿತು.

ಬಶೀರ್ ಕೂಡಾರ ಸ್ವಾಗತಿಸಿದರು. ನೂತನ ವಿಸ್ಡಂ ಕಾರ್ಯದರ್ಶಿ ಉನೈಸ್ ಮೀಂಪ್ರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News