×
Ad

ಉಳ್ಳಾಲ ಉರೂಸ್: ಫೆ.16ರಂದು ಡಾ.ಫಾರೂಕ್ ನಈಮಿ ಕೊಲ್ಲಂರಿಂದ ಪ್ರವಚನ

Update: 2022-02-15 16:29 IST

ಉಳ್ಳಾಲ, ಫೆ.15: ಉಳ್ಳಾಲ ಉರೂಸ್‍ ಪ್ರಯುಕ್ತ ನಡೆಯುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಫೆ.16ರಂದು ಡಾ.ಫಾರೂಕ್ ನಈಮಿ ಕೊಲ್ಲಂ ಮುಖ್ಯ ಪ್ರವಚನ ನೀಡಲಿದ್ದಾರೆ.

ಬುಧವಾರ ಮಗ್ರಿಬ್ ನಮಾಝ್ ಬಳಿಕ ನಡೆಯುವ ಸಮಾರಂಭದಲ್ಲಿ ಉಡುಪಿ ಖಾಝಿ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್, ದುವಾಶೀರ್ವಚನ ನೀಡುವರು. ಡಾ.ಹುಸೈನ್ ಸಖಾಫಿ ಚುಲ್ಲಿಕ್ಕೋಡು ಭಾಷಣ ಮಾಡುವರು.

ಡಾ.ಹಕೀಂ ಅಝ್ಹರಿ, ಇಸ್ಮಾಯೀಲ್ ಮದನಿ ನಾವುಂದ, ಮುಸ್ತಫ ಸಅದಿ ಶಿರ್ವ, ಅಬ್ದುರ್ರಹ್ಮಾನ್ ಮದನಿ ಮೂಳೂರು,

ಮುಹಮ್ಮದ್ ಕುಂಞಿ ಅಂಜದಿ, ಇಬ್ರಾಹೀಂ ಕಾಜೂರು, ಅಬೂಬಕರ್ ನೇಜಾರು, ಹಾಜಿ ಚೆರಿಯಬ್ಬ ಮಾವಿನಕಟ್ಟೆ, ತೌಫೀಕ್ ಅಬ್ದುಲ್ಲ ನಾವುಂದ, ಹಾಜಿ ಎಸ್.ಮಹ್ಮೂದ್ ನೇರಳಕಟ್ಟೆ, ಹಾಜಿ ಅಬ್ದುರ್ರಹ್ಮಾನ್ ಅರಿಯಡ್ಕ, ಹುಸೈನ್ ಕುಂಞಿಮೋನು, ಮುಹಮ್ಮದ್ ಮುಕ್ಕಚ್ಚೇರಿ ಮತ್ತಿತರರು ಉಪಸ್ಥಿತರಿರುವರು ಎಂದು ಉಳ್ಳಾಲ ದರ್ಗಾ ಉರೂಸ್ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News