×
Ad

ಮಂಗಳೂರು: ಅಂಬರ್ ಗ್ರೀಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರ ಸೆರೆ

Update: 2022-02-15 18:37 IST
ಶಬಾದ್ / ಶರೀಫ್  / ಅಸೀರ್ / ಜಾಬಿರ್  

ಮಂಗಳೂರು, ಫೆ.15: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಬಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ.

ಬಂಧಿತರನ್ನು ಕೊಡಗು ಜಿಲ್ಲೆಯ ಭಾಗಮಂಡಲ ನಿವಾಸಿ ಜಾಬಿರ್ ಎಂ.ಎ. (35) ಮತ್ತು ಶಬಾದ್ ಎಲ್.ಕೆ. (27) ಹಾಗೂ ಕಾಂಞಂಗಾಡಿನ ಅಸೀರ್ (36) ಮತ್ತು ಶರೀಫ್ ಎನ್.(32) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 2.20 ಕೋ.ರೂ. ಮೌಲ್ಯದ ಅಂಬರ್ ಗ್ರೀಸ್, 5 ಮೊಬೈಲ್, 1 ಸ್ವಿಫ್ಟ್ ಕಾರು ಮತ್ತು 1,070 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 2,25,92,070 ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಗಳು ಈ ಅಂಬರ್ ಗ್ರೀಸನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಕಂಕನಾಡಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ  ಪ್ರತಿಧ್ವನಿಸಿದ ಹಿಜಾಬ್ ವಿಚಾರ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News