×
Ad

ರಾಜ್ಯದಲ್ಲಿ ನ್ಯಾಯಾಲಯದ ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಗೊಂದಲ ಸೃಷ್ಟಿಸಲಾಗುತ್ತಿದೆ: ಅಬ್ದುಲ್ ಮಜೀದ್

Update: 2022-02-16 18:22 IST

ಮಂಗಳೂರು, ಫೆ.16 ರಾಜ್ಯದಲ್ಲಿ ನ್ಯಾಯಾಲಯದ ಆದೇಶ ವನ್ನು  ಸರಿಯಾಗಿ ಅರ್ಥೈಸಿಕೊಳ್ಳದೆ ಗೊಂದಲ ಸೃಷ್ಟಿ ಸಲಾಗುತ್ತಿದೆ ಎಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮಧ್ಯಂತರ ಆದೇಶದಲ್ಲಿ ಸಮವಸ್ತ್ರ ಇರುವ ಸರಕಾರಿ ಪ.ಪೂ. ಕಾಲೇಜುಗಳಿಗೆ ಅನ್ವಯ ವಾಗುತ್ತದೆ ಆದರೆ ರಾಜ್ಯದ  ಇತರ  ಶಿಕ್ಷಣ ಸಂಸ್ಥೆ ಶಿಕ್ಷಣ ಇಲಾಖೆ, ಗೃಹ ಇಲಾಖೆಗ ಳು ಕೋರ್ಟ್ ಆದೇಶ ಪಾಲನೆ ಮಾಡಲಿ ಕೆಲವು ಕಡೆ ಹಿಜಾಬ್ ಅನ್ನು ವಿದ್ಯಾರ್ಥಿಗಳಿಂದ, ಶಿಕ್ಷಕಿಯರಿಂದ ಬಲವಂತವಾಗಿ ತೆಗೆಸುವ, ಕಿರುಕುಳ ನೀಡುವ ಘಟನೆಗಳು ನಡೆಯುತ್ತಿದೆ. ಹಿಜಾಬ್ ಧರಿಸಿರುವವರನ್ನು ಬೆನ್ನಟ್ಟಿ ಕಿರುಕುಳ ನೀಡುತ್ತಿರುವುದು ಇಂತಹ ಘಟನೆಗಳು ಸಂವಿಧಾನ ದ ವಿರೋಧಿ ಕೃತ್ಯ ಗಳಾಗಿವೆ.
ಕಾಂಗ್ರೆಸ್ ನವರ ಇಬ್ಬಗೆಯ  ನೀತಿಯನ್ನು ಅನುಸರಿಸುತ್ತದೆ. ಮುಸ್ಲಿಮರ ಓಟ್ ಬೇಕು ಅವರ ಜ್ವಲಂತ ಸಮಸ್ಯೆಯ ಬಗ್ಗೆ ಕಾಳಜಿಯಿಲ್ಲ ಡಿಕೆಶಿ ಯಾವುದೇ ರೀತಿ ಹಿಜಾಬ್ ಬಗ್ಗೆ ಮಾತನಾಡುವುದಿಲ್ಲ. ಅವರು ಸಾಫ್ಟ್ ಹಿಂದುತ್ವ ಅಜೆಂಡಾ ತೆಗೆದುಕೊಂಡು ತಮ್ಮ ಪಕ್ಷದ ಸಮಾಧಿಯನ್ನು ತಾವೇ ಮಾಡಿ ಕೊಳ್ಳುತ್ತಿದ್ದಾರೆ ಅಬ್ದುಲ್ ಮಜೀದ್ ತಿಳಿಸಿದ್ದಾರೆ.

ಹಿಜಾಬ್ ಧಾರಣೆ ಮೂಲಭೂತ ಹಕ್ಕು, ಅದನ್ನು ವಿರೋಧಿಸುವುದು ವೈಯಕ್ತಿಕ ಸ್ವಾತಂತ್ರ್ಯ ಉಲ್ಲಂಘನೆ ಮಾಡಿದಂತಾಗುತ್ತದೆ. ರಾಜ್ಯ ದಲ್ಲಿ ಸರಕಾರಿ ಪ್ರಾಯೋಜಿತವಾಗಿ ಗೊಂದಲ ಸೃಷ್ಟಿ ಯಾಗಿದೆ. ಈ ಸಂದರ್ಭದಲ್ಲಿ ಪ್ರತಿಪಕ್ಷ ತಮ್ಮ ಬದ್ಧತೆ ಪ್ರದರ್ಶಿ ಸಲಿ. ವಿಧಾನ ಸೌಧದದಲ್ಲಿ ಈ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲಿ. ಭಯದ ವಾತಾವರಣವನ್ನು ದೂರ ಮಾಡಲು ಶ್ರಮಿಸಬೇಕು. ಕಾಂಗ್ರೆಸ್ ನ, ಜೆಡಿಎಸ್ ನ ಬದ್ಧತೆಯನ್ನು ಪ್ರಶ್ನಿಸಬೇಕು. ಸಂವಿಧಾನ ದತ್ತ ವಾದ ಹಕ್ಕು ಗಳ ಚಲಾವಣೆಗೆ ಅಡ್ಡಿಪಡಿಸದಂತೆ ತಮ್ಮ ಸ್ಪಷ್ಟ ವಾದ ನಿಲುವನ್ನು ಸರಕಾರದ ಮುಂದಿಟ್ಟು ಸೌಹಾರ್ದಯುತ ಪರಿಹಾರವನ್ನು ಕಂಡು ಕೊಳ್ಳಬೇಕು ಎಂದು ಅಬ್ದುಲ್ ಮಜೀದ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ್  ಪ್ರಸಾದ್ , ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್, ಮನಪಾ ಸದಸ್ಯ ಮುನಿಬ್ ಬೆಂಗ್ರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News