×
Ad

​ಗಾಂಜಾ ಸಾಗಾಟ ಆರೋಪ: ಮೂವರ ಬಂಧನ

Update: 2022-02-16 23:30 IST

ಮಂಗಳೂರು, ಫೆ.16: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜನಾಡಿ ಗ್ರಾಮದ ಉರುಮನೆ ಕ್ರಾಸ್ ಎಂಬಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಮಂಗಳವಾರ ಬಂಧಿಸಲಾಗಿದೆ.

ಆರೋಪಿಗಳನ್ನು ವರ್ಕಾಡಿ ಗ್ರಾಮದ  ಹನೀಫ್, ತಲಪಾಡಿ ಸಮೀಪದ ಕೆಸಿ ರೋಡ್‌ನ ಹಬೀಬ್, ಮಂಜೇಶ್ವರ ಗ್ರಾಮದ ನಸೀಬ್ ಎಂದು ಗುರುತಿಸಲಾಗಿದೆ.

ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳಿಂದ 1.340 ಕೆಜಿ ಗಾಂಜಾ ವಶಪಡಿಸಲಾಗಿದೆ. ಇದರ ಮೌಲ್ಯ 13,400 ರೂ. ಮತ್ತು ವಶಪಡಿಸಿಕೊಂಡ ದ್ವಿಚಕ್ರ ವಾಹನದ ಮೌಲ್ಯ 25 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News