ತನ್ನ 54 ಆ್ಯಪ್‍ಗಳನ್ನು ಭಾರತ ನಿಷೇಧಿಸಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಚೀನಾ

Update: 2022-02-17 13:12 GMT

ಬೀಜಿಂಗ್: ರಾಷ್ಟ್ರೀಯ ಸುರಕ್ಷತೆ ಮತ್ತು ಭದ್ರತೆಯ ಕಾರಣಗಳನ್ನು ನೀಡಿ ಭಾರತ ಸರಕಾರ ಚೀನೀ ನಿರ್ಮಿತ ಇನ್ನೂ 54 ಆ್ಯಪ್‍ಗಳನ್ನು ಇತ್ತೀಚೆಗೆ ನಿಷೇಧಿಸಿರುವ ಬಗ್ಗೆ ತನ್ನ ತೀವ್ರ ಕಳವಳವನ್ನು ಚೀನಾ ವ್ಯಕ್ತಪಡಿಸಿದೆ. ಭಾರತವು ಚೀನಾದ ಸಂಸ್ಥೆಗಳ ಸಹಿತ ಎಲ್ಲಾ ವಿದೇಶಿ ಹೂಡಿಕೆದಾರರನ್ನು ಪಾರದರ್ಶಕ, ನ್ಯಾಯಯುತ ಮತ್ತು ತಾರತಮ್ಯರಹಿತ ಧೋರಣೆಯಿಂದ ನೋಡಿಕೊಳ್ಳುತ್ತದೆ ಎಂದು ತಾನು ನಿರೀಕ್ಷಿಸುವುದಾಗಿ ಚೀನಾ ಹೇಳಿದೆ.

ಚೀನೀ ಆ್ಯಪ್‍ಗಳ ನಿಷೇಧ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಾಣಿಜ್ಯ ಸಚಿವಾಲಯದ ವಕ್ತಾರ ಗಾವೊ ಫೆಂಗ್, "ದ್ವಿಪಕ್ಷೀಯ ಆರ್ಥಿಕ ಮತ್ತು ವ್ಯಾಪಾರ ಸಹಕಾರವನ್ನು ಮುಂದುವರಿಸಿಕೊಂಡು ಹೋಗಲು ಭಾರತ ಕ್ರಮಕೈಗೊಳ್ಳುವುದೆಂದು ನಿರೀಕ್ಷಿಸುತ್ತೇವೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News