ಏರಿಕೆಯಾದ ವಿಮಾನ ಇಂಧನ ದರ: ಇನ್ನಷ್ಟು ದುಬಾರಿಯಾಗಲಿರುವ ವಾಯುಯಾನ !

Update: 2022-02-17 13:14 GMT

ಹೊಸದಿಲ್ಲಿ: ವಿಮಾನಗಳಿಗೆ ಬಳಸುವ ಇಂಧನ-ಏವ್ಯೇಷನ್ ಟರ್ಬೈನ್ ಫ್ಯೂಯೆಲ್ ಅಥವಾ ಎಟಿಎಫ್ ದರಗಳನ್ನು ಬುಧವಾರ ತೈಲ ಮಾರುಕಟ್ಟೆ ಕಂಪೆನಿಗಳು ಏರಿಕೆ ಮಾಡಿರುವುದರಿಂದ ವಿಮಾನ ಪ್ರಯಾಣ ಇನ್ನಷ್ಟು ದುಬಾರಿಯಾಗುವ ನಿರೀಕ್ಷೆಯಿದೆ. ಬುಧವಾರ ಮಾಡಲಾಗಿರುವ ದರ ಏರಿಕೆ ಫೆಬ್ರವರಿಯಲ್ಲಿ ಮಾಡಲಾಗಿರುವ ಎರಡನೇ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಿಮಾನಗಳ ಇಂಧನ ಬೆಲೆ ತಲಾ ಕಿಲೋಲೀಟರ್‍ಗೆ ರೂ 86,038.16 ನಿಂದ ರೂ 90,519.79ಗೆ ಏರಿಕೆಯಾಗಿದೆ.

ಇತರ ಮೆಟ್ರೋ ನಗರಗಳಾದ ಕೊಲ್ಕತ್ತಾ, ಮುಂಬೈ ಮತ್ತು ಚೆನ್ನೈಯಲ್ಲಿ ಕ್ರಮವಾಗಿ ರೂ 94,888.70, ರೂ 88,987.20 ಹಾಗೂ ರೂ 93,371.18ಗೆ ಏರಿಕೆಯಾಗಿದೆ.

ಈಗಾಗಲೇ ಸಾಲದ ಒತ್ತಡದಲ್ಲಿರುವ ವಿಮಾನಯಾನ ಸಂಸ್ಥೆಗಳಿಗೆ ಎಟಿಎಫ್ ಬೆಲೆಯೇರಿಕೆ ಇನ್ನಷ್ಟು ಹೊರೆ ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿದೆ.

ಸದ್ಯ ಇಂಧನದ ಮೇಲಿನ ವೆಚ್ಚಗಳು ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣಾ ವೆಚ್ಚಗಳ ಶೇ 30ರಷ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News