×
Ad

ನಕಲಿ ವಸ್ತುಗಳ ಮಾರಾಟದ ವಿರುದ್ಧ ದೂರು

Update: 2022-02-17 21:27 IST

ಮಂಗಳೂರು, ಫೆ.17: ಚೆನ್ನೈ ಮೂಲದ ಇಐಪಿಆರ್ (ಇಂಡಿಯಾ)ಪ್ರೈ.ಲಿ. ಸಂಸ್ಥೆಗೆ ಸೇರಿದ ಬ್ಯಾಟರಿ ಮತ್ತು ಜಾರ್ಜರ್‌ನ್ನು ನಕಲಿಯಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ನಗರದ ಬಂದರ್ ಠಾಣೆಯಲ್ಲಿ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಟಿ. ಮಣಿಮಾರನ್ ದೂರು ನೀಡಿದ್ದಾರೆ.

ಈ ಸಂಸ್ಥೆಯ ಎಫ್‌ಆರ್‌ಡಿ ಉತ್ಪಾದನೆಯ ಸೊತ್ತುಗಳ ಸರ್ವೆ ಇತ್ಯಾದಿಗಳ ಜವಾಬ್ದಾರಿಯನ್ನು ತನಗೆ ನೀಡಿದೆ. ಮಾಹಿತಿಯೊಂದನ್ನು ಆಧರಿಸಿ ತಾನು ಗುರುವಾರ ಬೆಳಗ್ಗೆ 10:30ಕ್ಕೆ ನಗರದ ಸಿಟಿಮಾರ್ಕೆಟ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಮಹಾದೇವ ಟೆಲಿಕಾಂ ಮತ್ತು ಎಸ್‌ವಿ ಮೊಬೈಲ್ ಶಾಪ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಇಆರ್‌ಡಿ ಕಂಪೆನಿಯ ಹೆಸರಿನಲ್ಲಿ ನಕಲಿ ಬ್ಯಾಟರಿ ಮತ್ತು ಜಾರ್ಜರನ್ನು ಮಾರಾಟ ಮಾಡಲು ಇಟ್ಟಿರುವುದು ಮತ್ತು ವಿಚಾರಿಸಿದಾಗ ನಗರದ ಕೋಡಿಯಾಲ್‌ ಗುತ್ತು ಬಳಿಯ ಗೋದಾಮಿನಲ್ಲೂ ದಾಸ್ತಾನಿರಿಸಿವುದು ಕಂಡು ಬಂತು. ಇದನ್ನು ರತನ್ ಎಂಬಾತ ಬೇರೆ ಬೇರೆ ಕಡೆ ಪೂರೈಕೆ ಮಾಡುತ್ತಿದ್ದಾನೆ. ಈ ಬಗ್ಗೆ ಕ್ರಮ ಜರಗಿಸಬೇಕು ಎಂದು ಮಣಿಮಾರನ್ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News