ಹಿಜಾಬ್ ವಿಚಾರದದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ವಿರೋಧಿಸುತ್ತೇನೆ: ನಟಿ ಝೈರಾ ವಾಸೀಂ
Update: 2022-02-20 11:06 IST
ಹೊಸದಿಲ್ಲಿ: ದಂಗಲ್ ಸಿನಿಮಾದ ಖ್ಯಾತ ನಟಿ ಝೈರಾ ವಾಸಿಂ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ನಿಷೇಧದ ವಿವಾದದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸುವ ಕ್ರಮವನ್ನು ಟೀಕಿಸುವ ಪೋಸ್ಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ.
ಇಸ್ಲಾಂನಲ್ಲಿ ಹಿಜಾಬ್ ಧರಿಸುವುದು ಒಂದು ಆಯ್ಕೆಯಲ್ಲ, ಅದು ಒಂದು ಬಾಧ್ಯತೆ, ತಾನು ‘ಕೃತಜ್ಞತೆ’ ಮತ್ತು ನಮ್ರತೆಯಿಂದ ಹಿಜಾಬ್ ಧರಿಸುತ್ತೇನೆ ಎಂದು ಅವರು ಹೇಳಿದ್ದಾರೆ.
"ಕೃತಜ್ಞತೆ ಮತ್ತು ನಮ್ರತೆಯಿಂದ ಹಿಜಾಬ್ ಧರಿಸುವ ಮಹಿಳೆಯಾಗಿ, ಧಾರ್ಮಿಕ ಆಚರಣೆ ನಿರ್ವಹಿಸುವ ಮಹಿಳೆಯರನ್ನು ತಡೆಯುವ ಮತ್ತು ಅವರಿಗೆ ಕಿರುಕುಳ ನೀಡುವ ಈ ಸಂಪೂರ್ಣ ವ್ಯವಸ್ಥೆಯನ್ನು ನಾನು ವಿರೋಧಿಸುತ್ತೇನೆ" ಎಂದು ಅವರು ಬರೆದಿದ್ದಾರೆ. ಮುಸ್ಲಿಂ ಮಹಿಳೆಯರನ್ನು ಹಿಜಾಬ್ ಮತ್ತು ಶಿಕ್ಷಣದ ನಡುವೆ ಆಯ್ಕೆ ಮಾಡಲು ಒತ್ತಾಯಿಸುವುದು ಅನ್ಯಾಯ ಎಂದು ಅವರು ಹೇಳಿದ್ದಾರೆ.