×
Ad

ಸುರತ್ಕಲ್: ಟೋಲ್ ಗೇಟ್ ವಿರುದ್ಧ ಧರಣಿ ಕುಳಿತಿದ್ದ ಆಸಿಫ್ ಆಪತ್ಬಾಂಧವ ಪೊಲೀಸ್ ವಶಕ್ಕೆ

Update: 2022-02-21 16:57 IST
ಆಸಿಫ್ ಆಪತ್ಬಾಂಧವ

ಸುರತ್ಕಲ್, ಫೆ,21: ಎನ್‌ಐಟಿಕೆ ಟೋಲ್ ಗೇಟ್  ವಿರುದ್ಧ ಕಳೆದ 15 ದಿನಗಳಿಂದ ಆಹೋರಾತ್ರಿ ಧರಣಿ ಕುಳಿತಿದ್ದ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪದ್ಬಾಂಧವ ಹಾಗೂ ಸ್ಥಳದಲ್ಲಿದ್ದ ಇತರ ಮೂವರನ್ನು ಸುರತ್ಕಲ್ ಠಾಣಾ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಕೆಲವು ದಿನಗಳ ಹಿಂದೆ ತಡರಾತ್ರಿ ಧರಣಿ ವೇದಿಕೆಗೆ ನುಗ್ಗಿದ ಮಂಗಳಮುಖಿಯರು ಅವಾಚ್ಯ ಶಬ್ದಗಳಿಂದ ಬೈದು ವಿಕೃತಿ ತೋರಿಸಿ ಆಸಿಫ್ ಆಪತ್ಬಂಧವ ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಆಸಿಫ್ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದಲ್ಲಿ ಆರು ಮಂದಿ ಮಂಗಳಮುಖಿಯರ ಬಂಧನ ಕೂಡ ನಡೆದಿತ್ತು. ಈ ಮಧ್ಯೆ ಮಂಗಳಮುಖಿಯರು ಆಸೀಫ್‌ರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಗೆ ಪ್ರತಿದೂರು ನೀಡಿದ್ದರು.

ಸೋಮವಾರ ಪ್ರತಿಭಟನೆ ನಿರತರಾಗಿದ್ದ ಆಸಿಫ್ ಆಪತ್ಬಾಂಧವ, ಅಶೀರ್, ಶಾಹಿದ್ ಹಾಗೂ ಸಂತೋಷ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ ವಾಹನ ಮತ್ತಿತರ ವಸ್ತುಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.

ಪೊಲೀಸರು ವಶಪಡಿಸುವ ವೇಳೆಗೆ ಇದು ನನ್ನ ಮುಂದಿನ ಉಗ್ರ ಹೋರಾಟದ ಪ್ರಾರಂಭ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News