×
Ad

ಮಾರ್ಚ್ 4ರಂದು ಚಂದ್ರನ ಮೇಲೆ ಅಪ್ಪಳಿಸಲಿರುವ ರಾಕೆಟ್; ʼನಮ್ಮದಲ್ಲʼ ಎನ್ನುತ್ತಿರುವ ಚೀನಾ

Update: 2022-02-21 19:50 IST

 ಬೀಜಿಂಗ್: ಮಾರ್ಚ್ 4 ರಂದು  ಚಂದ್ರನ ಮೇಲೆ ಅಪ್ಪಳಿಸಲಿದೆಯೆನ್ನಲಾದ ರಾಕೆಟ್ ಕುರಿತಂತೆ ತನ್ನ ಜವಾಬ್ದಾರಿಯಿಂದ ಚೀನಾ ನುಣುಚಿಕೊಂಡಿದೆ. ಬಾಹ್ಯಾಕಾಶದ ತ್ಯಾಜ್ಯವೆಂದು ತಿಳಿಯಲಾದ ಈ ರಾಕೆಟ್ ಬೀಜಿಂಗ್‍ನ ಚಂದ್ರಯಾನ ಸಂಬಂಧಿತ ಯೋಜನೆಯ ತ್ಯಾಜ್ಯವಾಗಿದೆ ಎಂದು ತಜ್ಞರು ಹೇಳಿದ ನಂತರ ಚೀನಾದ ಹೇಳಿಕೆ ಬಂದಿದೆ.

ಏಳು ವರ್ಷಗಳ ಹಿಂದೆ ಉಡಾಯಿಸಲಾದ ಮತ್ತು ಅದರ ಕಾರ್ಯ ಪೂರ್ತಿಗೊಂಡ ನಂತರ ಬಾಹ್ಯಾಕಾಶದಲ್ಲಿಯೇ ತ್ಯಜಿಸಲ್ಪಟ್ಟಿದ್ದ ಸ್ಪೇಸ್‍ಎಕ್ಸ್ ರಾಕೆಟ್‍ನ ಒಂದು ತುಂಡು ಇದಾಗಿದೆ ಎಂದು ಖಗೋಳಶಾಸ್ತ್ರಜ್ಞರು ಈ ಹಿಂದೆ ಅಂದುಕೊಂಡಿದ್ದರು.

ಆದರೆ ಚೀನಾದ ಬಾಹ್ಯಾಕಾಶ ಏಜನ್ಸಿಯ ಚಂದ್ರ ಅನ್ವೇಷಣಾ ಕಾರ್ಯಕ್ರಮದನ್ವಯ 2014ರಲ್ಲಿ ಉಡಾಯಿಸಲಾದ ಚೇಂಚ್-ಇ 5-1ಇಐ ಇದರ ಬೂಸ್ಟರ್ ಎಂದು ಈಗ ತಿಳಿದು ಬಂದಿದೆ. ಈ ರಾಕೆಟ್  ಭೂಮಿಗೆ ಕಾಣದ ಚಂದ್ರನ ಭಾಗದ ಮೇಲೆ ಮಾರ್ಚ್ 4ರಂದು ಅಪ್ಪಳಿಸಲಿದೆ ಎನ್ನಲಾಗಿದೆ.

ಆದರೆ ಮೇಲೆ ಹೇಳಲಾದ ಬೂಸ್ಟರ್ ಭೂಮಿಯ ವಾತಾವರಣವನ್ನು ಸುರಕ್ಷಿತವಾಗಿ ಪ್ರವೇಶಿಸಿ ಹಾಗೂ ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News