ಉಡುಪಿ: ಆತ್ರಾಡಿಯ ಶ್ರೀತಾಳೆಮರಕ್ಕೆ ಮನಸೋತ ವಿದೇಶಿಗರು!

Update: 2022-02-21 16:02 GMT

ಉಡುಪಿ: ಆತ್ರಾಡಿಯ ಜಗಜೀವನದಾಸ್ ಹೆಗ್ಗಡೆ ಅವರ ಮನೆಯ ಅಂಗಳದಲ್ಲಿ ಹೂಬಿಟ್ಟು, ಕಾಯಿಯಾಗಿ ತಲೆಎತ್ತಿ ರಥದಂತೆ ಕಂಗೊಳಿಸುತ್ತಿರುವ ಶ್ರೀತಾಳೆ ಮರದ ಅಂದವನ್ನು ನೋಡಲು ಹಾಗೂ ತುಳು ಭಾಷಾ ಅಧ್ಯಯನದ ರಾಯಭಾರಿಯಾಗಿ, ಭಾಷಾ ತಜ್ಞರಾಗಿ ಆಚಾರ ವಿಚಾರಗಳ ಬಗ್ಗೆ ಅಧ್ಯಯನ ಮಾಡಲು ಉಡುಪಿಗೆ ಆಗಮಿಸಿದ ಸ್ವೀಡನ್ ದೇಶದ ಪ್ರಜೆಗಳಾದ ಪ್ರೇಯ, ಎಮಿನ್ ಹಾಗೂ ಸ್ಪಂದನ ಅಪರೂಪದ ಮರವಿದ್ದ ಸ್ಥಳಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶ್ರೀತಾಳೆಮರದ ಬಗ್ಗೆ ವಿಶೇಷ ಅಧ್ಯಯನ ನಡೆಸುತ್ತಿರುವ ಮತ್ತು ಮರದ ಸಂತತಿ ಉಳಿಸುವ ನಿಟ್ಟಿನಲ್ಲಿ ಬೀಜ ಪ್ರಸರಣದಲ್ಲೂ ಕಾರ್ಯೋನ್ಮುಖರಾಗಿರುವ ಉಡುಪಿಯ ಪ್ರೊ.ಎಸ್.ಎ.ಕೃಷ್ಣಯ್ಯ ವಿದೇಶಿಗರಿಗೆ ಮರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಜೊತೆಗೆ ಶ್ರೀತಾಳೆಮರದ ಬೀಜವನ್ನು ಸ್ವೀಡನ್ ದೇಶದ ಪ್ರಜೆಗಳಿಗೆ ಹಸ್ತಾಂತರಿಸಿದರು. ಸ್ವೀಡನ್ ಪ್ರವಾಸಿಗರು ಇಲ್ಲಿಂದ ಶ್ರೀಲಂಕಾಕ್ಕೆ ತೆರಳಲಿದ್ದು, ಅಲ್ಲಿ ಈ ಮರದ ಬೀಜವನ್ನು ನೆಡುವ ಬಗ್ಗೆ ತಿಳಿಸಿದರು. ಶ್ರೀತಾಳೆ ಮರವು ಶ್ರೀಲಂಕಾ ದೇಶದ ರಾಷ್ಟ್ರೀಯ ವೃಕ್ಷ ಆಗಿರುವುದಾಗಿ ಪ್ರೊ.ಕೃಷ್ಣಯ್ಯ ತಿಳಿಸಿದ್ದಾರೆ.

ಜೊತೆಗೆ ಶ್ರೀತಾಳೆಮರದ ಬೀಜವನ್ನು ಸ್ವೀಡನ್ ದೇಶದ ಪ್ರಜೆಗಳಿಗೆ ಹಸ್ತಾಂತರಿಸಿದರು. ಸ್ವೀಡನ್ ಪ್ರವಾಸಿಗರು ಇಲ್ಲಿಂದ ಶ್ರೀಲಂಕಾಕ್ಕೆ ತೆರಳಲಿದ್ದು, ಅಲ್ಲಿ ಈ ಮರದ ಬೀಜವನ್ನು ನೆಡುವ ಬಗ್ಗೆ ತಿಳಿಸಿದರು. ಶ್ರೀತಾಳೆ ಮರವು ಶ್ರೀಲಂಕಾದೇಶದ ರಾಷ್ಟ್ರೀಯ ವೃಕ್ಷ ಆಗಿರುವುದಾಗಿ ಪ್ರೊ.ಕೃಷ್ಣಯ್ಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗಣೇಶ್ ರಾಜ್ ಸರಳೇಬೆಟ್ಟು, ರವಿ ಅಳ್ವಾ ಜೊತೆಗಿದ್ದರು. ಈ ಮರವು ಹೂವು ಬಿಟ್ಟ ಸಂದರ್ಭದಲ್ಲಿ ಮೂಢನಂಬಿಕೆಗಳಿಂದ ಅದನ್ನು ಕಡಿಯಲಾಗುತಿದ್ದು, ಆದರೆ ಪ್ರೊ.ಕೃಷ್ಣಯ್ಯ ಅವರ ಮನವರಿಕೆಯಿಂದ ಜಗಜೀವನ್ ದಾಸ್ ಹೆಗ್ಗಡೆ ಅವರು ಈ ಮರವನ್ನು ಕಡಿಯದೇ ಹಾಗೆ ಬಿಟ್ಟಿದ್ದಾರೆ. ಇದಕ್ಕಾಗಿ ವಿದೇಶಿಗರು ಅವರನ್ನು ಅಭಿನಂದಿಸಿದರು.

ಸರಳೆಬೆಟ್ಟುಗೆ ಸನ್ಮಾನ: ಆತ್ರಾಡಿಯಲ್ಲಿ ಶ್ರೀತಾಳೆ ಮರ ಹೂಬಿಟ್ಟ ಸಂದರ್ಭದಲ್ಲಿ ಮನೆ ಮಾಲಕರ ಮನ ಒಲಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಅದರ ರಕ್ಷಣೆಗೆ ಅಭಿಯಾನ ನಡೆಸಿ ಅದನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಾಮಾಜಿಕ ಕಾರ್ಯಕರ್ತ ಗಣೇಶ್ ಸರಳೆಬೆಟ್ಟು ಅವರನ್ನು ಮೂಡಬಿದ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಜೈನಮಠದ ಭಟ್ಟಾರಕ ಸಭಾಭವನದಲ್ಲಿ ಇತ್ತೀಚೆಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಎಸ್.ಎ.ಕೃಷ್ಣಯ್ಯ, ಇತಿಹಾಸ ಸಂಶೋಧಕ ಶ್ರೀಧರ ಭಟ್ ಕಲ್ಯಾಣಪುರ, ಶುತ್ರೇಶ್ ಆಚಾರ್ಯ ಮೂಡುಬೆಳ್ಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News