ದುಬೈ ಜತೆ ಶಾರ್ಜಾ, ರಾಸ್‌ಅಲ್‌ಖೈಮಾಕ್ಕೆ ಪ್ರಯಾಣಿಸುವರಿಗೂ ರ‍್ಯಾಪಿಡ್ ಪಿಸಿಆರ್ ಟೆಸ್ಟ್ ರದ್ದು

Update: 2022-02-22 14:15 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಫೆ. 22: ಭಾರತದಿಂದ ದುಬೈ, ಶಾರ್ಜಾ ಹಾಗೂ ರಾಸ್ ಅಲ್‌ಖೈಮಾಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣದ ಆರು ಗಂಟೆಯ ಮುಂಚಿತವಾಗಿ ನಡೆಸಲಾಗುತ್ತಿದ್ದ ರ‍್ಯಾಪಿಡ್ ಪಿಸಿಆರ್ ಟೆಸ್ಟ್ ತಕ್ಷಣದಿಂದ ಜಾರಿಯಾಗುವಂತೆ ರದ್ದುಗೊಳಿಸಲಾಗಿದೆ.

ಇದೇ ವೇಳೆ ಈಗಾಗಲೇ ಜಾರಿಯಲ್ಲಿರುವಂತೆ 48 ಗಂಟೆಯೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಈ ಪ್ರಯಾಣಿಕರು ಹೊಂದಿರಬೇಕಾಗುತ್ತದೆ. ಅಬುದಾಬಿಗೆ ಪ್ರಯಾಣಿಸುವವರಿಗೆ ಸಂಬಂಧಿಸಿ ಈಗಾಗಲೇ ಇರುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದುಬೈ, ಶಾರ್ಜಾ ಹಾಗೂ ರಾಸ್ ಅಲ್‌ಖೈಮಾಕ್ಕೆ ಪ್ರಯಾಣಿಸುವವರಿಗೆ ಮಾತ್ರ ಈ ಹೊಸ ನಿಯಮ ಅನ್ವಯವಾಗಲಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ 'ವಾರ್ತಾಭಾರತಿ'ಗೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News