×
Ad

ಪಂಜಿಮೊಗರು: ಪ್ರಾರ್ಥನಾ ಕೇಂದ್ರ ನೆಲಸಮ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಬಂಧನ

Update: 2022-02-22 22:40 IST
ಲತೀಶ್ / ಧನಂಜಯ್

ಮಂಗಳೂರು, ಫೆ.22: ನಗರ ಹೊರವಲಯದ ಕೂಳೂರು ಸಮೀಪದ ಪಂಜಿಮೊಗರು-ಉರುಂದಾಡಿ ಗುಡ್ಡೆ ಎಂಬಲ್ಲಿ ಫೆ.5ರಂದು ಸೈಂಟ್ ಆ್ಯಂಟನಿ ಹೋಲಿ ಕ್ರಾಸ್ ಪ್ರಾರ್ಥನಾ ಕೇಂದ್ರವನ್ನು ನೆಲಸಮಗೈದ ಘಟನೆಗೆ ಸಂಬಂಧಿಸಿ ಕಾವೂರು ಪೊಲೀಸರಿಂದ ಬಂಧಿಸಲ್ಪಟ್ಟ ಇಬ್ಬರು ಆರೋಪಿಗಳಿಗನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. .

ಬಜ್ಪೆಯ ಲತೀಶ್ (28) ಮತ್ತು ಮೂಲತಃ ಪಂಜಿಮೊಗರುವಿನ ಪ್ರಸ್ತುತ ಕೋಡಿಕಲ್ 9ನೆ ಕ್ರಾಸ್ ನಿವಾಸಿ ಧನಂಜಯ್ (36)ರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನಂತರ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸುಮಾರು 40 ವರ್ಷದ ಹಿಂದೆ ಸ್ಥಾಪಿಸಲಾದ ಈ ಪ್ರಾರ್ಥನಾ ಕೇಂದ್ರವನ್ನು ಫೆ.5ರಂದು ಜೆಸಿಬಿ ಬಳಸಿ ಕೆಡವಲಾಗಿತ್ತು. ಇದರಿಂದ ಆಕ್ರೋಶಗೊಂಡ ಸ್ಥಳೀಯ ಕ್ರೈಸ್ತರು ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕೂಳೂರು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News