ಹಿರಾ ವಿಮೆನ್ಸ್ ಕಾಲೇಜಿನಲ್ಲಿ ಫೈರ್ ಸೇಫ್ಟಿ ಮತ್ತು ಹೆಲ್ತ್ ಸೇಫ್ಟಿ ಮಾಹಿತಿ ಕಾರ್ಯಾಗಾರ
Update: 2022-02-23 11:03 IST
ಮಂಗಳೂರು, ಫೆ.23: ಬಬ್ಬುಕಟ್ಟೆಯ ಹಿರಾ ವಿಮೆನ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಫಸ್ಟ್ ನ್ಯೂರೋ ವತಿಯಿಂದ ಫೈರ್ ಸೇಫ್ಟಿ ಮತ್ತು ಹೆಲ್ತ್ ಸೇಫ್ಟಿ ಮಾಹಿತಿ ಕಾರ್ಯಾಗಾರವನ್ನು ಸೇಫ್ಟಿ ಫಸ್ಟ್ ಅಭಿಯಾನದ ಮೂಲಕ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸತ್ಯರಾಜ್ ವಿದ್ಯಾರ್ಥಿಗಳಿಗೆ, ಬೆಂಕಿ ಅವಘಡ ಸಂಭವಿಸಿದಾಗ ಯಾವ ರೀತಿ ಎಲ್ಲರನ್ನು ರಕ್ಷಿಸಬಹುದು ಎಂಬ ಮಾಹಿತಿಯನ್ನು ನೀಡುವುದರ ಜೊತೆಗೆ ಫೈರ್ ಎಸ್ಟಿಂಗ್ವಿಶರ್ ಬಳಸಿ ಬೆಂಕಿಯನ್ನು ಹೇಗೆ ನಂದಿಸಬಹುದು ಎಂಬ ಅಣುಕು ಪ್ರದರ್ಶನವನ್ನು ತೋರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಫಾತಿಮಾ ಮೆಹರೂನ್, ಆಡಳಿತಾಧಿಕಾರಿ ಝಾಕಿರ್ ಹುಸೈನ್, ಮ್ಯಾನೇಜರ್ ಸಮೀರ್ ಮತ್ತು ಉಪನ್ಯಾಸಕಿಯರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅಫ್ರೀನ್ ಮತ್ತು ಝಿಕ್ರಾ ಕಿರಾಅತ್ ಪಠಿಸಿದರು. ಅಫ್ನಾನ್ ಮತ್ತು ಆಮೀನ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲೆ ಭಾಗೀರಥಿ ವಂದಿಸಿದರು.