×
Ad

ದೇರಳಕಟ್ಟೆ: ದಾರುಸ್ಸಲಾಂ ಅಕಾಡೆಮಿ ವಾರ್ಷಿಕೋತ್ಸವ

Update: 2022-02-23 18:39 IST

ದೇರಳಕಟ್ಟೆ: ಅಲ್ಲಾಹನ ಅನುಗ್ರಹ ಸಿಗಬೇಕಾದರೆ ನಮ್ಮ ಕಾರ್ಯಚಟುವಟಿಕೆ ಅದೇ ರೀತಿ ಇರಬೇಕು. ಧಾರ್ಮಿಕ ಶಿಕ್ಷಣ ಇನ್ನಿತರ ಕಾರ್ಯಗಳ ಜೊತೆ ಕೈಜೋಡಿಸಬೇಕು ಎಂದು ಅಸ್ಸಯ್ಯದ್ ಒಎಂಎಸ್ ಶಿಹಾಬುದ್ದೀನ್ ಮುಹಮ್ಮದ್ ಅಲಿ ತಂಙಳ್ ಹೇಳಿದರು.

ಅವರು ಶಂಸುಲ್ ಉಲಮಾ ಮೆಮೋರಿಯಲ್ ದಾರುಸ್ಸಲಾಂ ಅಕಾಡೆಮಿ ಮಂಗಳನಗರ ಇದರ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಬ್ದುಲ್ ರಹಿಮಾನ್ ತಬೂಕು ದಾರಿಮಿ ಮಾತನಾಡಿ, ಧಾರ್ಮಿಕ ಶಿಕ್ಷಣದ ಮಹತ್ವದ ಬಗ್ಗೆ ವಿವರಿಸಿದರು.
ಅಬ್ದುಲ್ ಅಝೀಝ್ ದಾರಿಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಸ್ಮಾನ್ ಫೈಝಿ ತೋಡಾರ್ ದೀನೀ ತರಬೇತಿ ಕ್ಲಾಸ್ ಉದ್ಘಾಟಿಸಿದರು. ಶೈಖುನಾ ಮಾಹಿನ್ ಉಸ್ತಾದ್ ನೇತೃತ್ವ ವಹಿಸಿದ್ದರು.

ಅಸ್ಸಯ್ಯದ್ ಶಮೀಮ್ ತಂಙಳ್ ದುಆ ನೆರವೇರಿಸಿದರು. ಎಸ್ ಬಿ ಮುಹಮ್ಮದ್ ದಾರಿಮಿ, ಕೆಬಿ ಅಬ್ದುಲ್ ಖಾದರ್ ದಾರಿಮಿ, ಹನೀಫ್ ದಾರಿಮಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಂ.ಎಚ್.ಬಾವು, ಮೊಯ್ದಿನ್ ಬಾವಾ ಮಂಗಳಪೇಟೆ ಎ.ವಿ.ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ, ಆಸೀಫ್ ಅಝ್ ಹರಿ, ಮುಸ್ತಫಾ ಫೈಝಿ, ಮೂಸಾ ದಾರಿಮಿ, ಇಸ್ಹಾಕ್ ಫೈಝಿ, ಲತೀಫ್ ದಾರಿಮಿ ರೆಂಜಾಡಿ, ಸಿರಾಜ್ ಹುದವಿ, ಶರೀಫ್ ಲತೀಫಿ, ಸಿರಾಜ್ ಅಶಾಫಿ, ಎನ್ ಎಸ್ ಕರೀಂ, ಮೋನು ಮಲಾರ್, ನಾಸೀರ್ ಸಾಮಣಿಗೆ, ಹಕೀಂ ಪರ್ತಿಪ್ಪಾಡಿ, ಅಹ್ಮದ್ ಕುಂಞಿ ನೆಕ್ಕರೆ,ಎ.ಹೆಚ್ .ತುಂಬೆ, ಹುಸೈನ್ ಕುಂಞಿ , ಮುಹಮ್ಮದ್ ಅಕ್ಕರೆ ವಳಚ್ಚಿಲ್, ಮುಹಮ್ಮದ್ ಬಶೀರ್ ಚೊಕ್ಕ ಬೆಟ್ಟು, ನೂರು ಮುಹಮ್ಮದ್ ಚೊಕ್ಕ ಬೆಟ್ಟು, ಇಸ್ಮಾಯಿಲ್ ಪಡ್ಪು,ಆಸೀರ್, ಶೈಖ್ ಮುಹಮ್ಮದ್ ಸಿದ್ದೀಕ್,ಮಸೂದ್, ಅಬ್ಬಾಸ್ ಆನೆಕಲ್,ಜಮಾಲುದ್ದೀನ್, ಅಶ್ರಫ್,ಎ.ಅಬ್ಬಾಸ್, ಇಬ್ರಾಹಿಂ ಕೊಣಾಜೆ, ಎನ್ ಎ.ಅಶ್ರಫ್, ಫೈಝಲ್, ಅಬ್ಬಾಸ್ ಹಾಜಿ, ಮುಹಮ್ಮದ್ ಪನೀರ್, ಹಮೀದ್ ಮದ್ಪಾಡಿ ಝಕರಿಯಾ ಮಲಾರ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News