ರಶ್ಯಾ ದಾಳಿಯ ವೀಡಿಯೊ ಎಂದು ಹಳೆಯ ವೀಡಿಯೊವನ್ನು ಪ್ರಸಾರ ಮಾಡಿದ ಟೈಮ್ಸ್ ನೌ, ರಿಪಬ್ಲಿಕ್, ಝೀ ನ್ಯೂಸ್ ವಾಹಿನಿಗಳು !
ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣ ನಡೆಸುತ್ತಿರುವ ಮಧ್ಯೆಯೇ, ಹಲವು ಭಾರತೀಯ ಮಾಧ್ಯಮಗಳು ನಗರಗಳ ಮೇಲೆ ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಡುವ ವಿಡಿಯೋಗಳನ್ನು ಹಂಚಿಕೊಂಡಿವೆ. ಆದರೆ ಕೆಲ ವಾಹಿನಿಗಳು ಹಳೆಯ ವೀಡಿಯೊವನ್ನು ಪ್ರಸಾರ ಮಾಡಿದೆ ಎಂದು altnews.in ತನ್ನ ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ.
ಈ ವಿಡಿಯೋವನ್ನು ಬಳಸಿ Times Now ವಾಹಿನಿಯ ಅಧಿಕೃತ ಖಾತೆಯಲ್ಲಿ ʼ“#RussiaUkraineCrisis: 5 ರಷ್ಯಾ ವಿಮಾನಗಳನ್ನು, 1 ಹೆಲಿಕಾಪ್ಟರನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಹೇಳಿದೆ” ಎಂದು ಟ್ವೀಟ್ ಮಾಡಿದೆ.
"ಬ್ರೇಕಿಂಗ್ : ರಷ್ಯಾ ಉಕ್ರೇನ್‌ನ ಖಾರಿವ್‌ನಲ್ಲಿ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ" ಎಂಬ ಅಡಿಬರಹದೊಂದಿಗೆ ʼಜನ್ ಕಿ ಬಾತ್ʼ ಅದೇ ವೀಡಿಯೊವನ್ನು ಟ್ವೀಟ್ ಮಾಡಿದೆ. ಈ ಟ್ವೀಟ್ 2,000 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಗಳಿಸಿದೆ.
ನ್ಯೂಸ್ 24(ಸದ್ಯ ವೀಡಿಯೊ ಡಿಲೀಟ್ ಮಾಡಲಾಗಿದೆ), ರಿಪಬ್ಲಿಕ್ ವರ್ಲ್ಡ್(ಸದ್ಯ ವೀಡಿಯೊ ಡಿಲೀಟ್ ಮಾಡಲಾಗಿದೆ), ಝೀ ನ್ಯೂಸ್ ಮತ್ತು ನ್ಯೂಸ್ ಎಕ್ಸ್ ಕೂಡ ಈ ವಿಡಿಯೋವನ್ನು ಉಕ್ರೇನ್ – ರಷ್ಯಾ ಬಿಕ್ಕಟ್ಟಿಗೆ ಸಂಬಂಧ ಕಲ್ಪಿಸಿ ಪ್ರಸಾರ ಮಾಡಿದೆ.
ಸದ್ಯ ಹರಿದಾಡುತ್ತಿರುವ ವಿಡಿಯೋ ಕುರಿತು Alt news ಪರಿಶೀಲನೆ ನಡೆಸಿದ್ದು, ಇದು ರಷ್ಯಾ-ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧವೇ ಪಡದ ವಿಡಿಯೋ ಎನ್ನುವುದನ್ನು ಕಂಡುಹಿಡಿದಿದೆ. ಅಸಲಿಗೆ ಈ ವಿಡಿಯೋವನ್ನು 2020 ರ ಮೇ 4 ರಂದು ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದರಲ್ಲಿರುವ ಮಾಹಿತಿ ಪ್ರಕಾರ ಅದು ರಷ್ಯಾ ಸೇನೆಯು ಮಾಡಿದ ತಾಲೀಮಿನ ಹಳೆ ವಿಡಿಯೋವಾಗಿದೆ ಎಂದು ತಿಳಿದು ಬಂದಿದೆ.
ಆಲ್ಟ್ ನ್ಯೂಸ್ ಪ್ರಕಟಿಸಿರುವ ವರದಿ ಪ್ರಕಾರ, 1945 ರಲ್ಲಿ ನಾಝಿಯನ್ನು ಮಣಿಸಿದ ನೆನಪಿಗಾಗಿ ಪ್ರತಿವರ್ಷದ ಮೇ 9 ರಂದು ವಿಜಯ ದಿವಸವನ್ನಾಗಿ ರಷ್ಯಾದಲ್ಲಿ ಆಚರಿಸಲಾಗುತ್ತಿದ್ದು, ಅದರ ಭಾಗವಾಗಿ ರಷ್ಯಾ ವಾಯುಸೇನೆ ನಡೆಸುವ ತಾಲೀಮಿನ ಭಾಗವಾಗಿದೆ ಇದು. ಈ ವಿಡಿಯೋಗೂ ಸದ್ಯ ನಡೆಯುತ್ತಿರುವ ಬಿಕ್ಕಟ್ಟಿಗೂ ಯಾವುದೇ ಸಂಬಂಧವಿಲ್ಲ ಎಂದು ವರದಿ ಹೇಳಿದೆ.
Altnews.in
#RussiaUkraineCrisis: Ukraine says 5 Russian planes, 1 helicopter shot down in Luhansk#PutinOnTheMarch #Russia #Ukraine pic.twitter.com/yl1SR70lhc
— TIMES NOW (@TimesNow) February 24, 2022