×
Ad

ಮಾತೃ ಭಾಷೆಯ ಬಗೆಗೆ ಅಭಿಮಾನ ಅಗತ್ಯ: ಡಾ.ರಮೀಝ್

Update: 2022-02-25 15:51 IST

ಕೊಣಾಜೆ, ಫೆ.25: ಭಾಷೆ ಎನ್ನುವುದು ಅಭಿವ್ಯಕ್ತಿ ಮಾಧ್ಯಮ. ಮಾತೃಭಾಷೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇನ್ನಷ್ಟು ಸ್ಪಷ್ಟವಾಗಿಸುತ್ತದೆ. ಮಾತೃಭಾಷೆಯೊಂದಿಗೆ ಅಭಿಮಾನವಿರಬೇಕು, ಅದರ ಉಳಿವಿಗಾಗಿ ನಮ್ಮ ಪ್ರಯತ್ನಗಳು ಅಗತ್ಯ ಎಂದು ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲ ಡಾ.ರಮೀಝ್ ಕೆ. ಹೇಳಿದ್ದಾರೆ.

ವಿಶ್ವ ಮಾತೃ ಭಾಷಾ ದಿನಾಚರಣೆಯ ಅಂಗವಾಗಿ  ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸರ್ಫ್ರಾಝ್ ಜೆ. ಹಾಸಿಂ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಿ.ಎ. ಎಂಬಿಎ ವಿಭಾಗದ ನಿರ್ದೇಶಕ ಡಾ.ಸೈಯದ್ ಅಮೀನ್, ವಿಜ್ಞಾನ ವಿಭಾಗದ ಮುಖ್ಯಸ್ಥ ಮ್ಯೂರಿಯಲ್ ಮಸ್ಕತ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೀತಿ ಫ್ಲೇವಿಯ ಪಿರೇರ, ಗಣಕ ವಿಭಾಗದ ಮುಖ್ಯಸ್ಥೆ ಚೈತ್ರಾ ಬಿ.ಎಸ್., ಭಾಷಾ ವಿಭಾಗದ ಮುಖ್ಯಸ್ಥ ಶರ್ವಾನ ಇಕ್ಬಾಲ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ದೀಪ್ತಿ ಉದ್ಯಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಆಯಿಶಾ ಫಾಹಿಮ ಸ್ವಾಗತಿಸಿದರು. ಮುಹಮ್ಮದ್ ಅಮಾನ್ ವಂದಿಸಿದರು. ಹನಾ ಮರಿಯಂ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News