×
Ad

ಸಂಘರ್ಷದಲ್ಲಿ ರಷ್ಯಾದ 100ಕ್ಕೂ ಅಧಿಕ ಸೈನಿಕರ ಸಾವು, ಇತಿಹಾಸದಲ್ಲೇ ಇಷ್ಟು ದೊಡ್ಡ ಹೊಡೆತ ಇದೇ ಮೊದಲು: ಉಕ್ರೇನ್‌

Update: 2022-02-25 22:15 IST

ಖೈವ್:‌ ಉಕ್ರೇನ್‌ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ವಿರುದ್ಧ ಉಕ್ರೇನ್ ತಕ್ಕ ಮಟ್ಟಿಗೆ ಪ್ರತಿರೋಧ ನೀಡುತ್ತಿದೆ ಎಂದು ವರದಿಯಾಗಿದೆ.

ಉಕ್ರೇನ್‌ನ ರಕ್ಷಣಾ ಸಚಿವಾಲಯವು, ಉಕ್ರೇನ್ ಸಂಘರ್ಷದಲ್ಲಿ ಇದುವರೆಗೆ 100 ಕ್ಕೂ ಅಧಿಕ ರಷ್ಯಾ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

 "ರಷ್ಯಾ ಪ್ರಾರಂಭದಿಂದಲೂ ತನ್ನ ಯಾವುದೇ ಸಶಸ್ತ್ರ ಸಂಘರ್ಷಗಳ ಹೋರಾಟದ ಸಮಯದಲ್ಲಿ ಇಷ್ಟೊಂದು ಸಾವುನೋವುಗಳನ್ನು ಅನುಭವಿಸಿರಲಿಲ್ಲ" ಎಂದು ಉಕ್ರೇನ್ ಹೇಳಿಕೊಂಡಿದೆ.

ಅದಾಗ್ಯೂ, ಉಕ್ರೇನ್‌ ರಾಜಧಾನಿಯನ್ನು ಈಗಾಗಲೇ ಸುತ್ತುವರೆದಿರುವ ರಷ್ಯನ್‌ ಪಡೆ ಕೆಲವೇ ಘಂಟೆಗಳೊಳಗೆ ರಾಜಧಾನಿ ಕೈವ್‌ ಸಂಪೂರ್ಣವಾಗಿ ರಷ್ಯನ್‌ ಪಾಲಾಗಲಿದೆ ಎಂದು ಪಾಶ್ಚಾತ್ಯ ತಜ್ಞರು ವಿಶ್ಲೇಷಿಸಿರುವುದಾಗಿ ವರದಿ ಆಗಿದೆ.

ರಷ್ಯನ್‌ ಸೇನೆ ಉಕ್ರೆನ್‌ ನುಗ್ಗಿದ್ದರೂ, ತಾನು ರಾಜಧಾನಿ ಬಿಟ್ಟು ತೆರಳುವುದಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ತಿಳಿಸಿದ್ದಾರೆ. ಮಾಸ್ಕೋದ ಮೊದಲ ಗುರಿ ನಾನು, ಎರಡನೆ ಗುರಿ ನನ್ನ ಕುಟುಂಬ, ಆದರೂ ತಾನು ದೇಶ ಬಿಟ್ಟು ಹೋಗುವುದಿಲ್ಲ ಎಂದು ಅಧ್ಯಕ್ಷ ವೋಲ್ದಿಮಿರ್ ಝೆಲ್ಯಂಸ್ಕಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News