ನಮ್ಮ ಸೇನೆಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಾನು ಕರೆ ನೀಡಿಲ್ಲ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

Update: 2022-02-26 09:07 GMT
Photo:twitter

ಕೀವ್(ಉಕ್ರೇನ್): ತಮ್ಮ ರಾಜಧಾನಿಯ ಮೇಲಿನ ರಷ್ಯಾದ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಉಕ್ರೇನ್ ಪಡೆಗಳು ಶನಿವಾರ ಹೇಳಿದ ನಂತರ, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸೆಲ್ಫಿ ಶೈಲಿಯ ವೀಡಿಯೊವನ್ನು ಚಿತ್ರೀಕರಿಸಿದರು ಹಾಗೂ  ಹೋರಾಡಲು ಪ್ರತಿಜ್ಞೆ ಮಾಡಿದರು.

"ನಾನು ಇಲ್ಲಿದ್ದೇನೆ. ನಾವು ಯಾವುದೇ ಆಯುಧಗಳನ್ನು ತ್ಯಜಿಸುವುದಿಲ್ಲ. ನಾವು ನಮ್ಮ ರಾಜ್ಯವನ್ನು ರಕ್ಷಿಸುತ್ತೇವೆ, ಏಕೆಂದರೆ ನಮ್ಮ ಶಸ್ತ್ರಾಸ್ತ್ರಗಳು ನಮ್ಮ ಸತ್ಯ" ಎಂದು ಅವರು ಘೋಷಿಸಿದರು.

 ತಾನು  ಶರಣಾಗಿದ್ದೇನೆ  ಅಥವಾ ಓಡಿಹೋಗಿದ್ದೇನೆ ಎಂಬ ತಪ್ಪು ವರದಿಗಳನ್ನುಝೆಲೆನ್ಸ್ಕಿ ಖಂಡಿಸಿದರು.

"ನಮ್ಮ ಸೇನೆಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಾನು ಕರೆ ನೀಡಿದ್ದೇನೆ ಹಾಗೂ  ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳುವ ಮೂಲಕ ಅಂತರ್ಜಾಲದಲ್ಲಿ ಸಾಕಷ್ಟು ನಕಲಿ ಮಾಹಿತಿ ಕಾಣಿಸಿಕೊಂಡಿದೆ" ಎಂದು ಝೆಲೆನ್ಸ್ಕಿ ತಮ್ಮ ಕಚೇರಿಯ ಹೊರಗೆ ಹೇಳಿದರು.

ಹಸಿರು ಬಣ್ಣದ ಮಿಲಿಟರಿ ಶೈಲಿಯ ಉಡುಪುಗಳನ್ನು ಧರಿಸಿದ್ದ ಹಾಗೂ ದಣಿದಂತೆ ಕಂಡುಬಂದಿರುವ  ವೊಲೊಡಿಮಿರ್ ಝೆಲೆನ್ಸ್ಕಿ "ಇದು ನಮ್ಮ ಭೂಮಿ, ನಮ್ಮ ದೇಶ, ನಮ್ಮ ಮಕ್ಕಳು ಮತ್ತು ನಾವು ಎಲ್ಲವನ್ನೂ ರಕ್ಷಿಸುತ್ತೇವೆ ಎಂಬುದು ನಮ್ಮ ಸತ್ಯ’’ ದೃಢನಿಶ್ಚಯದಿಂದ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News