ಆನ್ಲೈನ್ ನಲ್ಲಿ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸುವುದು ಹೇಗೆ ? ಇಲ್ಲಿದೆ ಮಾಹಿತಿ

Update: 2022-02-27 06:20 GMT
ಸಾಂದರ್ಭಿಕ ಚಿತ್ರ (dnaindia.com)

ಕೇಂದ್ರ ಸರ್ಕಾರದ ಪಿಂಚಣಿದಾರರಿಂದ ವಾರ್ಷಿಕ ಜೀವನ ಪ್ರಮಾಣಪತ್ರಗಳು ಅಥವಾ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸುವ ಗಡುವನ್ನು ಕೇಂದ್ರವು ಫೆಬ್ರವರಿ 28, 2022 ರವರೆಗೆ ವಿಸ್ತರಿಸಿದೆ. ಕೋವಿಡ್ ಕಾರಣದಿಂದಾಗಿ ಪ್ರಮಾಣಪತ್ರವನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಿದೆ. ಈ ಮೊದಲು, ಪಿಂಚಣಿದಾರನು ತನ್ನ ಪಿಂಚಣಿಯನ್ನು ತಡೆರಹಿತವಾಗಿ ಪಡೆಯಲು ನವೆಂಬರ್ 30 ರ ಒಳಗೆ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿತ್ತು.

ಡಿಜಿಟಲ್ ಲೈಫ್ ಸರ್ಟಿಫಿಕೇಟ್

ಜೀವನ್ ಪ್ರಮಾಣ್ ವೆಬ್‌ಸೈಟ್ ಪ್ರಕಾರ, "ಜೀವನ್ ಪ್ರಮಾಣ್ ಪಿಂಚಣಿದಾರರ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಆಧಾರ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ. ದೃಢೀಕರಣವು ಯಶಸ್ವಿ ಆದಾಗ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ತಯಾರಿಸಲಾಗುತ್ತದೆ. ಅದನ್ನು ಲೈಫ್ ಸರ್ಟಿಫಿಕೇಟ್ ರೆಪೊಸಿಟರಿಯಲ್ಲಿ ಸಂಗ್ರಹಿಸಲಾಗುತ್ತದೆ. 

ಜೀವನ್ ಪ್ರಮಾಣ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲು ಹಂತ-ಹಂತದ ಮಾಹಿತಿ:

 ಹಂತ 1: ಜೀವನ್ ಪ್ರಮಾಣ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿ

 ಹಂತ 2: ನೀವು ಹೊಸ ಬಳಕೆದಾರರಾಗಿದ್ದರೆ, ಹೊಸದಾಗಿ ನೋಂದಾಯಿಸಿಕೊಳ್ಳಿ

 ಹಂತ 3: ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಹೆಸರು, ಪಿಂಚಣಿ ಪಾವತಿ ಆದೇಶ (PPO) ನಮೂದಿಸಿ

 ಹಂತ 4: ಮೌಲ್ಯೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಲು 'ಒಟಿಪಿ ಕಳುಹಿಸಿ' ಆಯ್ಕೆಮಾಡಿ.

 ಹಂತ 5: ನಿಮ್ಮ OTP ನಮೂದಿಸಿ.

 ಹಂತ 6: ನೀವು OTP ಅನ್ನು ಸಲ್ಲಿಸಿದ ನಂತರ ಮತ್ತು ಮೌಲ್ಯೀಕರಣವು ಯಶಸ್ವಿಯಾದ ನಂತರ ನೀವು ಪ್ರಮಾಣ್ ಐಡಿಯನ್ನು ಪಡೆಯುತ್ತೀರಿ

 ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ರಚಿಸಲು ಹಂತ-ಹಂತದ ಮಾಹಿತಿ

 ಹಂತ 1: ನಿಮ್ಮ ಹೊಸ ಐಡಿಯನ್ನು ಬಳಸಿ, ಜೀವನ್ ಪ್ರಮಾಣ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ ಮತ್ತು ಒಟಿಪಿ ರಚಿಸಿ.

 ಹಂತ 2: 'ಜೀವನ್ ಪ್ರಮಾಣ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಧಾರ್ ಮತ್ತು ಮೊಬೈಲ್ ಸಂಖ್ಯೆಗಳನ್ನು ಭರ್ತಿ ಮಾಡಿ.

 ಹಂತ 3: ಕಳಿಸಲಾದ OTP ಅನ್ನು ನಮೂದಿಸಿ.

 ಹಂತ 4: PPO ಸಂಖ್ಯೆ, ಪಿಂಚಣಿದಾರರ ಹೆಸರು ಮತ್ತು ವಿತರಿಸುವ ಏಜೆನ್ಸಿಯನ್ನು ನಮೂದಿಸಿ

 ಹಂತ 5: ಬಳಕೆದಾರರ ಫಿಂಗರ್‌ಪ್ರಿಂಟ್ ಅಥವಾ ಐರಿಸ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಆಧಾರ್ ಕೂಡ ಅವುಗಳನ್ನು ದೃಢೀಕರಿಸುತ್ತದೆ.

 ವಾರ್ಷಿಕ ಜೀವನ ಪ್ರಮಾಣಪತ್ರಗಳು ಅಥವಾ ಜೀವನ್ ಪ್ರಮಾಣ ಪತ್ರವು ಈಗ ಬಳಕೆದಾರರಿಗೆ ಲಭ್ಯವಿರುತ್ತದೆ.  ನೋಂದಾಯಿತ ಮೊಬೈಲ್ ಸಂಖ್ಯೆಗೆ ದೃಢೀಕರಣ ಸಂದೇಶವನ್ನು ಸಹ ಕಳುಹಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News